ಇಲ್ಲಿದೆ ಸರ್ಕಾರಿ ನೌಕರಿ ತೊರೆದು ಕೃಷಿಯಲ್ಲಿ ತೊಡಗಿಸಿಕೊಂಡ ವ್ಯಕ್ತಿಯ ಯಶಸ್ಸಿನ ಕಥೆ

ತಂಜಾವೂರು ಜಿಲ್ಲೆಯ ಕುರುವಾಡಿಪಟ್ಟಿ ಗ್ರಾಮದವರಾದ 36 ವರ್ಷದ ಮಾಜಿ ಪೊಲೀಸ್ ಸತೀಶ್ ಅವರು ತಮ್ಮ ಸ್ಮಾರ್ಟ್ ವರ್ಕ್‌ನಿಂದ ಮಾಸಿಕ 4 ಲಕ್ಷ ರೂಪಾಯಿ ವಹಿವಾಟು ನಡೆಸುತ್ತಿದ್ದಾರೆ. ತಮಿಳುನಾಡಿನ ನಿವಾಸಿಯ ಈ ಯಶಸ್ಸಿನ ಪ್ರಯಾಣವು ಅನೇಕರಿಗೆ ಉದಾಹರಣೆಯಾಗಿದೆ.

2009ರಿಂದ, ಸತೀಶ್ ಅವರು ತಮಿಳುನಾಡು ಪೊಲೀಸ್ ಇಲಾಖೆಯಲ್ಲಿ ಕಾನ್ಸ್‌ಟೇಬಲ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಅವರ ಪತ್ನಿ ಪ್ರಸ್ತುತ ತಂಜಾವೂರಿನಲ್ಲಿ ಪೊಲೀಸ್ ಪೇದೆಯಾಗಿ ಕೆಲಸ ಮಾಡುತ್ತಿದ್ದಾರೆ. ದಂಪತಿಗೆ ಒಬ್ಬ ಮಗಳು ಮತ್ತು ಒಬ್ಬ ಮಗ ಕೂಡ ಇದ್ದಾರೆ.

ಸತೀಶ್ ಪ್ರಕಾರ, ಬಾಲ್ಯದಿಂದಲೂ, ಅವರು ಯಾವಾಗಲೂ ಉತ್ತಮ ಪೊಲೀಸ್ ಆಗಬೇಕೆಂದು ಕನಸು ಕಂಡಿದ್ದರು ಮತ್ತು ಅವರು 2009 ರಲ್ಲಿ ಪೊಲೀಸ್ ಇಲಾಖೆಗೆ ಸೇರ್ಪಡೆಯಾಗಿದ್ದರು, ಆದರೆ ಹಲವಾರು ಅಹಿತಕರ ಕೆಲಸದ ಘಟನೆಗಳು ಮತ್ತು ವೇತನ ಹೆಚ್ಚಳದ ಕೊರತೆಯಿಂದಾಗಿ ಅವರು ಕೆಲಸಕ್ಕೆ ರಾಜೀನಾಮೆ ನೀಡಿದರು. ಆರಂಭದಲ್ಲಿ, ಈ ವಿಷಯದ ಬಗ್ಗೆ ಮನೆಯಲ್ಲಿ ತಿಳಿಸದೇ ಹಳ್ಳಿಯಲ್ಲಿ ಆಡು ಮತ್ತು ಕೋಳಿ ಸಾಕಲು ಪ್ರಾರಂಭಿಸುವ ಆಲೋಚನೆಯನ್ನು ಪತ್ನಿಗೆ ತಿಳಿಸಿದ್ದರು. ಹೆಂಡತಿಯ ಒಪ್ಪಿಗೆ ಪಡೆದು, ಅದನ್ನು ಶುರು ಮಾಡಿದರು.

“ಇದು ಆರೋಗ್ಯಕರ ನಿರ್ಧಾರವಲ್ಲ ಎಂದು ಸಹೋದ್ಯೋಗಿಗಳು ತಿಳಿಸಿದರೂ, ಗುರಿ ಸಾಧಿಸಲು ಬಯಸಿದರು. ಆರಂಭದಲ್ಲಿ ಅವರು ಮೇಕೆ ಸಾಕಾಣಿಕೆಯನ್ನು ಪ್ರಾರಂಭಿಸಿದರು. ತನ್ನ ಸ್ವಂತ ಜಮೀನಿನ ಮೂರು ಎಕರೆಯಲ್ಲಿ ಎರಡು ಎಕರೆ ಮೇಕೆ ಮೇವನ್ನು ಅಭಿವೃದ್ಧಿಪಡಿಸಿದರು. ನಂತರ ಕ್ರಮೇಣ ಇದರಿಂದ ಆದಾಯ ಗಳಿಸುತ್ತಿದ್ದಾರೆ. ಇತರರಿಗೆ ಮಾದರಿಯಾಗಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read