ವಿರಾಟ್ ಕೊಹ್ಲಿ ಬಹುಕೋಟಿ ಜಾಹಿರಾತುಗಳ ಹಿಂದಿದ್ದಾರೆ ರೋಹಿತ್ ಶರ್ಮಾ ಬಾವ….!

ವಿರಾಟ್ ಕೊಹ್ಲಿ ಪ್ರಸ್ತುತ ಒಟ್ಟು 1050 ಕೋಟಿ ನಿವ್ವಳ ಮೌಲ್ಯದ ಆಸ್ತಿ ಹೊಂದುವ ಮೂಲಕ ಶ್ರೀಮಂತ ಭಾರತೀಯ ಕ್ರಿಕೆಟಿಗರಾಗಿದ್ದಾರೆ. ಇದರಲ್ಲಿ ಹೆಚ್ಚಿನ ಪ್ರಮಾಣದ ಆಸ್ತಿಯನ್ನು ವಿವಿಧ ಬ್ರ್ಯಾಂಡ್‌ಗಳ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುವುದರ ಮೂಲಕ ಹಾಗೂ ಅದರ ಪ್ರಚಾರದಲ್ಲಿ ಭಾಗಿಯಾಗುವ ಮೂಲಕ ಸಂಪಾದಿಸಿದ್ದಾರೆ.

ಆದ್ರೆ ಈ ಎಲ್ಲಾ ಜಾಹಿರಾತುಗಳಲ್ಲಿ ವಿರಾಟ್​ ಕೊಹ್ಲಿ ಕಾಣಿಸಿಕೊಳ್ಳೋದ್ರ ಹಿಂದೆ ರೋಹಿತ್​ ಶರ್ಮಾ ಬಾವನ ಪಾತ್ರವಿದೆ ಎಂದರೆ ನಂಬಲೇಬೇಕು..!

ಹೌದು..! ರೋಹಿತ್​ ಶರ್ಮಾ ಪತ್ನಿಯ ಸೋದರ ಸಂಬಂಧಿ ಆಗಿರುವ ಬಂಟಿ ಸಜ್ದೇಹ್​​ ಅನೇಕ ಕ್ರಿಕೆಟಿಗರು ಹಾಗೂ ಸೆಲೆಬ್ರಿಟಿಗಳಿಗೆ ಬ್ರ್ಯಾಂಡ್​ ಮ್ಯಾನೇಜರ್​ ಆಗಿದ್ದಾರೆ. ಸದ್ಯ ಬಂಟಿ ಸಜ್ದೇಹ್ ಕಾರ್ನರ್‌ಸ್ಟೋನ್ ಸ್ಪೋರ್ಟ್ ಮತ್ತು ಎಂಟರ್‌ಟೈನ್‌ಮೆಂಟ್ ಪ್ರೈವೇಟ್ ಲಿಮಿಟೆಡ್ ಹಾಗೂ ಕಾರ್ನರ್‌ಸ್ಟೋನ್ ಸ್ಪೋರ್ಟ್ಸ್ ಮತ್ತು ಸ್ಪೋರ್ಟ್ಸ್ ಮಾರ್ಕೆಟಿಂಗ್ ಸಂಸ್ಥೆಯನ್ನು ನಡೆಸುತ್ತಿದ್ದಾರೆ.

ಬಂಟಿ ಸಜ್ದೇಹ್​​ ಸೋಹೈಲ್​ ಖಾನ್ ಮಾಜಿ ಪತ್ನಿ ಸೀಮಾ ಸಜ್ದೇಹ್​​ ಸ್ವಂತ ಸಹೋದರ ಕೂಡ. ಬಾಲಿವುಡ್​ ಹಾಗೂ ಕ್ರಿಕೆಟ್​ ಜಗತ್ತಿನೊಂದಿಗೆ ನಿಕಟ ಸಂಬಂಧ ಹೊಂದಿರುವ ಬಂಟಿ ಬಹುತೇಕ ಎಲ್ಲಾ ಕ್ರಿಕೆಟ್​ ತಾರೆಯರು ಹಾಗೂ ಸಿನಿಮಾ ತಾರೆಯರ ಬ್ರ್ಯಾಂಡ್​ ಮ್ಯಾನೇಜರ್​ ಆಗಿ ಕೆಲಸ ಮಾಡ್ತಿದ್ದಾರೆ.

ಬಂಟಿ ಸಜ್ದೇಹ್​ ತಮ್ಮ ಕಾರ್ನರ್​ಸ್ಟೋನ್​ ಸ್ಪೋರ್ಟ್ಸ್​ ಕಂಪನಿ ಮೂಲಕ ವಿರಾಟ್​​ ಕೊಹ್ಲಿ, ರೋಹಿತ್​ ಶರ್ಮಾ, ಶಿಖರ್​ ಧವನ್​, ಕೆಎಲ್​ ರಾಹುಲ್​ ಸೇರಿದಂತೆ ಇನ್ನೂ ಹಲವರ ಜಾಹೀರಾತು ಡೀಲ್​ಗಳನ್ನು ಕುದುರಿಸುತ್ತಾರೆ. ಇದೇ ಬ್ರ್ಯಾಂಡ್​ ಕಂಪನಿಯ ಮೂಲಕ ಎಂಆರ್​ಎಫ್​, ಮಿಂತ್ರಾ, ಸಿಂಥಾಲ್​, ವಿವೋ ಸೇರಿದಂತೆ ಹಲವು ಬ್ರ್ಯಾಂಡ್​ಗಳ ಜಾಹೀರಾತಿನ ಮೂಲಕ ಕೋಟಿ ಕೋಟಿ ದುಡಿಯುತ್ತಿದ್ದಾರೆ.

ಬಾಲಿವುಡ್​ ನಟ ಸುಶಾಂತ್​ ಸಿಂಗ್​ ರಜಪೂತ್​ ಆತ್ಮಹತ್ಯೆ ಬಳಿಕ ಸುದ್ದಿಯಲ್ಲಿರುವ ಸುಶಾಂತ್​ ಸಿಂಗ್​ ರಜಪೂತ್​ ಗರ್ಲ್​ಫ್ರೆಂಡ್​ ಆಗಿದ್ದ ನಟಿ ರಿಯಾ ಚಕ್ರವರ್ತಿ ಜೊತೆಯಲ್ಲಿ ಬಂಟಿ ಹೆಸರು ಥಳುಕು ಹಾಕಿಕೊಂಡಿತ್ತು. ಸುಶಾಂತ್​ ಸಿಂಗ್​ ರಜಪೂತ್​ ಸಾವು ಪ್ರಕರಣದಲ್ಲಿ ಸಿಬಿಐ ಬಂಟಿ ಸಜ್ದೇಹ್​ರ ವಿಚಾರಣೆ ಕೂಡ ನಡೆಸಿತ್ತು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read