ಬಡತನದಿಂದ ಬಿಲಿಯನೇರ್: ಬೆಂಗಳೂರಿನ ರಮೇಶ್ ಬಾಬು ಸ್ಫೂರ್ತಿದಾಯಕ ಕಥೆ !

ಬೆಂಗಳೂರಿನ ರಮೇಶ್ ಬಾಬು, ಬಡತನದಿಂದ ಬಿಲಿಯನೇರ್ ಆಗಿ ಬೆಳೆದ ಕಥೆ ನಿಜಕ್ಕೂ ಸ್ಫೂರ್ತಿದಾಯಕ. 13ನೇ ವಯಸ್ಸಿನಲ್ಲೇ ಕುಟುಂಬದ ಜವಾಬ್ದಾರಿ ಹೊತ್ತ ಅವರು ಪತ್ರಿಕೆ ಹಂಚುವುದು, ಹಾಲು ಮಾರುವಂತಹ ಕೆಲಸಗಳನ್ನು ಮಾಡುತ್ತಲೇ, ತಂದೆಯ ಕ್ಷೌರದಂಗಡಿಯನ್ನು ನೋಡಿಕೊಳ್ಳುತ್ತಿದ್ದರು.

ಶಿಕ್ಷಣದ ಮೇಲಿನ ಅಪಾರ ಪ್ರೀತಿಯಿಂದ ಎಲೆಕ್ಟ್ರಾನಿಕ್ಸ್‌ನಲ್ಲಿ ಡಿಪ್ಲೊಮಾ ಪಡೆದರು. 1993ರಲ್ಲಿ ಮಾರುತಿ ಓಮ್ನಿ ಕಾರು ಖರೀದಿಸಿ ಬಾಡಿಗೆಗೆ ನೀಡುವ ಮೂಲಕ ತಮ್ಮ ವ್ಯವಹಾರ ಆರಂಭಿಸಿದ್ದು, ಕ್ರಮೇಣ ತಮ್ಮ ವ್ಯವಹಾರವನ್ನು ಬೆಳೆಸುತ್ತಾ 400 ಐಷಾರಾಮಿ ಕಾರುಗಳ ಒಡೆಯರಾದರು.

ರೋಲ್ಸ್ ರಾಯ್ಸ್ ಘೋಸ್ಟ್, ಮರ್ಸಿಡಿಸ್ ಮೇಬ್ಯಾಚ್‌ನಂತಹ ಕೋಟ್ಯಂತರ ರೂಪಾಯಿ ಬೆಲೆಬಾಳುವ ಕಾರುಗಳು ಅವರ ಸಂಗ್ರಹದಲ್ಲಿವೆ. ರಮೇಶ್ ಟೂರ್ಸ್ & ಟ್ರಾವೆಲ್ಸ್ ಹೆಸರಿನಲ್ಲಿ ಸ್ಥಳೀಯ ಗ್ರಾಹಕರು, ಸೆಲೆಬ್ರಿಟಿಗಳು ಮತ್ತು ಗಣ್ಯ ವ್ಯಕ್ತಿಗಳಿಗೆ ಸೇವೆ ನೀಡುತ್ತಿದ್ದಾರೆ. ರಮೇಶ್ ಬಾಬು ಅವರ ನಿವ್ವಳ ಮೌಲ್ಯ ನೂರಾರು ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.

ರಮೇಶ್ ಬಾಬು ಅವರ ಯಶಸ್ಸಿನ ಕಥೆ ಅನೇಕರಿಗೆ ಮಾದರಿಯಾಗಿದೆ. ಅವರ ಪರಿಶ್ರಮ, ಛಲ ಮತ್ತು ಆತ್ಮವಿಶ್ವಾಸದಿಂದ ಅವರು ಬಡತನವನ್ನು ಮೆಟ್ಟಿ ನಿಂತು ಯಶಸ್ಸಿನ ಶಿಖರವನ್ನು ತಲುಪಿದ್ದಾರೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read