ಎಂಬಿಎ ವಿದ್ಯಾರ್ಥಿನಿಗೆ ದೊಡ್ಡ ಪ್ಯಾಕೇಜ್; ದಂಗಾಗಿಸುವಂತಿದೆ ಸಿಂಗಾಪೂರ್ ಮೂಲದ ಕಂಪನಿ ನೀಡುವ ವೇತನ

ಪಂಜಾಬ್ ವಿಶ್ವವಿದ್ಯಾಲಯದಿಂದ ಎಂಬಿಎ ಪದವೀಧರರಾಗಿರುವ ಯುವತಿಯೊಬ್ಬರು ಸಿಂಗಾಪೂರ್ ಮೂಲದ ಕಂಪನಿಯಿಂದ ಅತ್ಯಧಿಕ ಸಂಬಳದ ಪ್ಯಾಕೇಜ್ ಪಡೆದಿದ್ದಾರೆ.

25 ವರ್ಷದ ಅಂಶು ಸೂದ್ ಅವರು ಕಳೆದ ವರ್ಷ ಡಿಸೆಂಬರ್‌ನಲ್ಲಿ ಯೂನಿವರ್ಸಿಟಿ ಬ್ಯುಸಿನೆಸ್ ಸ್ಕೂಲ್‌ನಲ್ಲಿ (ಯುಬಿಎಸ್) ಕ್ಯಾಂಪಸ್ ಪ್ಲೇಸ್‌ಮೆಂಟ್ ಸಮಯದಲ್ಲಿ ಆಕೆಗೆ ವಾರ್ಷಿಕ 58.48 ಲಕ್ಷ ರೂಪಾಯಿಯ ಭಾರೀ ಪ್ಯಾಕೇಜ್ ಸಿಕ್ಕಿತು. ಸಿಂಗಾಪುರದಲ್ಲಿ ಪ್ರಧಾನ ಕಛೇರಿ ಹೊಂದಿರುವ ಟೋಲರಾಮ್ ಗ್ರೂಪ್‌ನಲ್ಲಿ ಮ್ಯಾನೇಜರ್ ಹುದ್ದೆಗೆ ಅವರು ಆಯ್ಕೆಯಾದರು.

ಟೋಲರಾಮ್ ಗ್ರೂಪ್‌ನಿಂದ ಆಯ್ಕೆಯಾದ ಏಕೈಕ ವಿದ್ಯಾರ್ಥಿನಿಯಾಗಿ ಅಂಶು ಸೂದ್ ಹೊರಹೊಮ್ಮಿದ್ದಾರೆ. ಅಂಶು ಸೂದ್ ಹೊಶಿಯಾರ್‌ಪುರದಲ್ಲಿರುವ ಯೂನಿವರ್ಸಿಟಿ ಇನ್‌ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಟೆಕ್ನಾಲಜಿಯಿಂದ ಬಿ.ಟೆಕ್ ಪದವಿಯನ್ನು ಪಡೆದರು. ನಂತರ ಅವರು ಯುಬಿಎಸ್‌ನಿಂದ ಎಂಬಿಎ ವ್ಯಾಸಂಗ ಮಾಡಿದರು. MBA ನಲ್ಲಿ ಬೇಸಿಗೆಯ ಇಂಟರ್ನ್‌ಶಿಪ್ ಸಮಯದಲ್ಲಿ ಅವರು ಏರ್‌ಟೆಲ್‌ನಲ್ಲಿ ಮಾರ್ಕೆಟಿಂಗ್ ಇಂಟರ್ನ್ ಆಗಿದ್ದರು.

ಮ್ಯಾನೇಜರ್ ಹುದ್ದೆಗೆ ಆಯ್ಕೆಯಾದ ನಂತರ ಸೂದ್ ಅವರು ವಾರ್ಷಿಕ ಸರಾಸರಿ 20 ಲಕ್ಷ ರೂ. ಸಂಬಳ ನಿರೀಕ್ಷಿಸಿದ್ದರಂತೆ. ಆದರೆ ಅವರ ಕಠಿಣ ಪರಿಶ್ರಮದಿಂದ ಹಾಗು ಎಲ್ಲಾ ಹಂತಗಳನ್ನು ಯಶಸ್ವಿಯಾಗಿ ಪೂರೈಸಿ ದೊಡ್ಡ ಪ್ಯಾಕೇಜ್ ಪಡೆದಿದ್ದಾರೆ.

ಅತ್ಯಂತ ದೊಡ್ಡ ಪ್ಯಾಕೇಜ್ ಸಿಕ್ಕಿರೋದಕ್ಕೆ ಖುಷಿಯಾಗಿದೆ. ಮೇ ತಿಂಗಳಲ್ಲಿ ನಾನು ಕಂಪನಿಯ ಕಾರ್ಯಾಚರಣೆಗೆ ಸೇರುತ್ತೇನೆ. ನಾನು ನನ್ನ ಶಿಕ್ಷಕರಿಗೆ ಮತ್ತು UBS ನ ಪ್ಲೇಸ್‌ಮೆಂಟ್ ಸೆಲ್‌ಗೆ ಧನ್ಯವಾದ ಹೇಳುತ್ತೇನೆ ಎಂದು ತಮ್ಮ ಕ್ಯಾಂಪಸ್ ಪ್ಲೇಸ್‌ಮೆಂಟ್ ನಂತರ ಹೇಳಿದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read