14 ರ ಬಾಲಕನ ಬೆರಗಿನ ಸಾಧನೆ : ಕ್ಷಣಾರ್ಧದಲ್ಲಿ ʼಹೃದಯಾಘಾತʼ ಪತ್ತೆ ಹಚ್ಚುತ್ತೆ ಆಪ್ !

ಅಮೆರಿಕಾದ ಟೆಕ್ಸಾಸ್‌ನ ಡಲ್ಲಾಸ್‌ನಲ್ಲಿ ವಾಸವಾಗಿರುವ 14 ವರ್ಷದ ಸಿದ್ಧಾರ್ಥ ನಂದ್ಯಾಲ ಎಂಬ ಬಾಲಕನೊಬ್ಬ ಅದ್ಭುತ ಸಾಧನೆ ಮಾಡಿದ್ದಾನೆ. ಸ್ಮಾರ್ಟ್‌ಫೋನ್‌ನ ಮೂಲಕವೇ ಕ್ಷಣಾರ್ಧದಲ್ಲಿ ಹೃದಯಾಘಾತವನ್ನು ಪತ್ತೆಹಚ್ಚುವ ಆ್ಯಪ್‌ ಒಂದನ್ನು ಆತ ಅಭಿವೃದ್ಧಿಪಡಿಸಿದ್ದಾನೆ. “ಸರ್ಕಾಡಿಯನ್ ಎಐ” ಎಂಬ ಈ ಆ್ಯಪ್‌ ಶೇ.96ರಷ್ಟು ನಿಖರತೆಯನ್ನು ಹೊಂದಿದೆ ಎಂದು ಹೇಳಲಾಗುತ್ತಿದೆ.

ಸಿದ್ಧಾರ್ಥ ನಂದ್ಯಾಲ, ಕೃತಕ ಬುದ್ಧಿಮತ್ತೆ, ಎಐ, ತಂತ್ರಜ್ಞಾನದಲ್ಲಿ ಆಸಕ್ತಿ ಹೊಂದಿದ್ದು, ಒರಾಕಲ್ ಮತ್ತು ಎಆರ್‌ಎಂನಿಂದ ಕೃತಕ ಬುದ್ಧಿಮತ್ತೆ ಪ್ರಮಾಣಪತ್ರಗಳನ್ನು ಪಡೆದಿದ್ದಾರೆ. ಅವರ ತಂದೆ ಮಹೇಶ್ ಮೂಲತಃ ಅನಂತಪುರದವರು.

ಈ ಆ್ಯಪ್‌ ಸ್ಮಾರ್ಟ್‌ಫೋನ್‌ನಲ್ಲಿರುವ ಮೈಕ್ರೊಫೋನ್‌ನಿಂದ ಹೃದಯದ ಶಬ್ದವನ್ನು ರೆಕಾರ್ಡ್ ಮಾಡಿ, ಕೃತಕ ಬುದ್ಧಿಮತ್ತೆಯ ಮೂಲಕ ವಿಶ್ಲೇಷಿಸಿ, ಹೃದಯ ಸಂಬಂಧಿ ಸಮಸ್ಯೆಗಳನ್ನು ಪತ್ತೆ ಮಾಡುತ್ತದೆ. ಅಮೆರಿಕಾದಲ್ಲಿ 15,000ಕ್ಕೂ ಹೆಚ್ಚು ಜನರು ಮತ್ತು ಭಾರತದ ಗುಂಟೂರಿನ ಜಿಜಿಎಚ್ ಆಸ್ಪತ್ರೆಯಲ್ಲಿ 700ಕ್ಕೂ ಹೆಚ್ಚು ರೋಗಿಗಳ ಮೇಲೆ ಇದನ್ನು ಪರೀಕ್ಷಿಸಲಾಗಿದೆ.

ಇತ್ತೀಚೆಗೆ ಸಿದ್ಧಾರ್ಥ ನಂದ್ಯಾಲ ಆಂಧ್ರಪ್ರದೇಶಕ್ಕೆ ಭೇಟಿ ನೀಡಿದಾಗ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರನ್ನು ಭೇಟಿಯಾಗಿ ಆ್ಯಪ್ ಬಗ್ಗೆ ಮಾಹಿತಿ ನೀಡಿದರು. ಈ ಆ್ಯಪ್‌ ಹೃದಯ ಸಂಬಂಧಿ ಸಮಸ್ಯೆಗಳನ್ನು ಕ್ಷಣಾರ್ಧದಲ್ಲಿ ಪತ್ತೆ ಮಾಡುತ್ತದೆ ಎಂದು ಮುಖ್ಯಮಂತ್ರಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.

ಸಿದ್ಧಾರ್ಥ ನಂದ್ಯಾಲ “ಸ್ಟೆಮ್-ಇಟ್ ಟೆಕ್” ಎಂಬ ಸಂಸ್ಥೆಯ ಸಿಇಒ ಆಗಿದ್ದಾರೆ. ಸ್ಟೆಮ್ ಶಿಕ್ಷಣವನ್ನು ಎಲ್ಲರಿಗೂ ಸುಲಭವಾಗಿ ತಲುಪಿಸುವ ಗುರಿಯನ್ನು ಅವರು ಹೊಂದಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read