ಒಂದೇ ಕಂಪನಿ ತಯಾರಿಸಿದ ಔಷಧಿ 2 ವಿಭಿನ್ನ ಬೆಲೆಗಳಿಗೆ ಮಾರಾಟ ; ವೈದ್ಯರಿಂದ ಶಾಕಿಂಗ್‌ ಮಾಹಿತಿ !

ಭಾರತದ ಔಷಧ ಮಾರುಕಟ್ಟೆಯಲ್ಲಿನ ಬೆಲೆಗಳ ಆಟಾಟೋಪವೊಂದು ಬೆಳಕಿಗೆ ಬಂದಿದೆ. ವೈದ್ಯರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಮಾಹಿತಿಯ ಪ್ರಕಾರ, ಒಂದೇ ಔಷಧವನ್ನು ಎರಡು ಬೇರೆ ಬೇರೆ ಕಂಪನಿಗಳು ಬೇರೆ ಬೇರೆ ಬೆಲೆಗೆ ಮಾರಾಟ ಮಾಡುತ್ತಿವೆ. ಅಚ್ಚರಿಯ ವಿಷಯವೆಂದರೆ ಈ ಎರಡೂ ಔಷಧಗಳನ್ನು ತಯಾರಿಸುತ್ತಿರುವ ಕಂಪನಿ ಒಂದೇ !

ಶೆಲ್ಕಾಲ್ ಎಚ್‌ಡಿ ಮತ್ತು ಸಿಪ್ಕಾಲ್ ಎಚ್‌ಡಿ ಎಂಬ ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ3 ಪೂರಕಗಳನ್ನು ಪ್ಯೂರ್ ಅಂಡ್ ಕ್ಯೂರ್ ಹೆಲ್ತ್‌ಕೇರ್ ಎಂಬ ಕಂಪನಿ ಉತ್ಪಾದಿಸುತ್ತಿದೆ. ಆದರೆ ಟೊರೆಂಟ್ ಫಾರ್ಮಾ ಮಾರಾಟ ಮಾಡುವ ಶೆಲ್ಕಾಲ್ ಎಚ್‌ಡಿ ಬೆಲೆ ₹ 150 ಆಗಿದ್ದರೆ, ಸಿಪ್ಲಾ ಮಾರಾಟ ಮಾಡುವ ಸಿಪ್ಕಾಲ್ ಎಚ್‌ಡಿ ಕೇವಲ ₹ 104 ಕ್ಕೆ ಲಭ್ಯವಿದೆ. ಅಂದರೆ ಒಂದೇ ಔಷಧಕ್ಕೆ ಸುಮಾರು ಶೇ 50 ರಷ್ಟು ಬೆಲೆ ವ್ಯತ್ಯಾಸ!

ಈ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿರುವ ಡಾ. ರಾಕೇಶ್ ಗರ್ಗ್, ಬೇರೆ ಬ್ರಾಂಡ್ ಹೆಸರಿನಲ್ಲಿ ಮಾರಾಟ ಮಾಡುವುದರಿಂದ ಒಂದೇ ಔಷಧಿಗೆ ಹೆಚ್ಚು ಹಣ ಕೊಡುವುದು ನ್ಯಾಯಸಮ್ಮತವೇ ಎಂದು ಪ್ರಶ್ನಿಸಿದ್ದಾರೆ. ಕೇವಲ ಪ್ರಿಸ್ಕ್ರಿಪ್ಷನ್‌ನಲ್ಲಿ ಬರೆದಿದೆ ಎಂಬ ಕಾರಣಕ್ಕೆ ರೋಗಿಗಳು ಏಕೆ ದುಬಾರಿ ಬೆಲೆ ತೆರಬೇಕು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೆನೆರಿಕ್ ಔಷಧಗಳ ವಿಷಯದಲ್ಲೂ ಬ್ರ್ಯಾಂಡಿಂಗ್ ಮತ್ತು ಮಾರ್ಕೆಟಿಂಗ್ ಹೇಗೆ ಬೆಲೆಗಳ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನು ಅವರು ವಿವರಿಸಿದ್ದಾರೆ.

ಸರ್ಕಾರ ಇಂತಹ ಬೆಲೆ ವ್ಯತ್ಯಾಸಗಳನ್ನು ನಿಯಂತ್ರಿಸಲು ವಿಫಲವಾಗಿದೆ ಎಂದು ಟೀಕಿಸಿರುವ ಡಾ. ಗರ್ಗ್, ಎಲ್ಲರಿಗೂ ಕೈಗೆಟುಕುವ ದರದಲ್ಲಿ ಔಷಧಗಳು ಸಿಗುವಂತೆ ಮುಕ್ತ ಮತ್ತು ಸ್ಪರ್ಧಾತ್ಮಕ ಮಾರುಕಟ್ಟೆ ಇರಬೇಕು ಎಂದು ಒತ್ತಾಯಿಸಿದ್ದಾರೆ. ಹಿಂದೆ ತಾವು ಸಿಪ್ಕಾಲ್ ಅನ್ನು ಕೇವಲ ₹ 30 ಕ್ಕೆ ಖರೀದಿಸಿದ್ದಾಗಿ ಅವರು ನೆನಪಿಸಿಕೊಂಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read