‘CET Rank’ ಪಡೆದ ವಿಕಲಚೇತನ ಅಭ್ಯರ್ಥಿಗಳಿಗೆ ಮುಖ್ಯ ಮಾಹಿತಿ : ವೈದ್ಯಕೀಯ ತಪಾಸಣೆ ದಿನಾಂಕ ಪ್ರಕಟ

‘ಸಿಇಟಿ ರ್ಯಾಂಕ್’ ಪಡೆದಿರುವ ಅಭ್ಯರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಮಹತ್ವದ ಮಾಹಿತಿಯೊಂದನ್ನು ನೀಡಿದ್ದು, ರ್ಯಾಂಕ್ ಪಡೆದ ವಿಕಲಚೇತನ ಅಭ್ಯರ್ಥಿಗಳಿಗೆ ವೈದ್ಯಕೀಯ ತಪಾಸಣೆ ದಿನಾಂಕ ಮತ್ತು ಯಾವ ದಾಖಲೆಗಳನ್ನು ಸಲ್ಲಿಸಬೇಕು ಎನ್ನುವುದರ ಬಗ್ಗೆ ಮಾಹಿತಿ ನೀಡಿದೆ.

ಸಿಇಟಿ-2023 ರಲ್ಲಿ ರಾಂಕ್ ಪಡೆದಿರುವ ವಿಕಲಚೇತನ ಅಭ್ಯರ್ಥಿಗಳಿಗೆ ಅಂಗವಿಕಲತೆ ಅರ್ಹತೆಯನ್ನುಪರೀಕ್ಷಿಸಲು ದಿನಾಂಕ 26-06-2023, 27-06-2023 ಮತ್ತು 28-06-2023 ರಂದು ವೈದ್ಯರ ಸಮಿತಿಯಿಂದ ವೈದ್ಯಕೀಯ ತಪಾಸಣೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ, ಬೆಂಗಳೂರು ಇಲ್ಲಿ ನಡೆಸಲಾಗುವುದು. ವೈದ್ಯಕೀಯ ತಪಾಸಣೆಗೆ ಹಾಜರಾಗಬೇಕಾದ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಾಧಿಕಾರದ ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿದೆ. ಅಭ್ಯರ್ಥಿಗಳು ಅವರುಗಳ ಹೆಸರಿನ ಮುಂದೆ ನಿಗದಿಪಡಿಸಿರುವ ದಿನಾಂಕಗಳಂದು ವೈದ್ಯಕೀಯ ತಪಾಸಣೆಗೆ ಹಾಜರಾಗಬೇಕು. ದೈಹಿಕ ವಿಕಲಚೇತನದ ವಿಶೇಷ ಪ್ರವರ್ಗದ ಕೋಟಾದ ಅಡಿಯಲ್ಲಿ ಸೀಟನ್ನು ಕೋರುವ ವಿದ್ಯಾರ್ಥಿಗಳು, ಬೆಂಗಳೂರಿನ ಕೆ.ಪ.ಪ್ರಾದ ಕಚೇರಿಯಲ್ಲಿ ನಡೆಸುವ ವೈದ್ಯಕೀಯ ಪರೀಕ್ಷೆಗೆ ಕಡ್ಡಾಯವಾಗಿ ಹಾಜರಾಗಬೇಕಿರುತ್ತದೆ. ವೈದ್ಯಕೀಯ ಸಮಿತಿಯು ಪರಿಶೀಲಿಸಿ ನೀಡುವ ವಿಕಲಚೇತನರ ಅರ್ಹತೆ ವಿಷಯದಲ್ಲಿ ವೈದ್ಯಕೀಯ ಸಮಿತಿಯ ನಿರ್ಧಾರವೇ ಅಂತಿಮವಾಗಿರುತ್ತದೆ ಎಂದು ಪ್ರಕಟಣೆ ಹೊರಡಿಸಿದೆ.

ವೈದ್ಯಕೀಯ ತಪಾಸಣೆ : ಕರ್ನಾಟಕ ಪರೀಕ್ಷಾ ಪ್ರಾಧಿಕಾರ, 18ನೇ ಅಡ್ಡ ರಸ್ತೆ, ಮಲ್ಲೇಶ್ವರಂ, ಬೆಂಗಳೂರು ಸಮಯ:- ಬೆಳಿಗ್ಗೆ 10.00 ರಿಂದ (ವರದಿ ಮಾಡಿಕೊಳ್ಳುವ ಸಮಯ: ಬೆಳಿಗ್ಗೆ 9.30)

ವೈದ್ಯಕೀಯ ತಪಾಸಣೆಯಲ್ಲಿ ನಿಯಮಾನುಸಾರ ಅರ್ಹತೆ ಪಡೆಯುವ ಅಭ್ಯರ್ಥಿಗಳು ಮಾತ್ರ ವಿಕಲಚೇತನ ಕೋಟದ ಅಡಿಯಲ್ಲಿ ಸೀಟು ಪಡೆಯಲು ಪರಿಗಣಿಸಲಾಗುವುದು.

ವೈದ್ಯಕೀಯ ಪರೀಕ್ಷೆಗೆ ಅಭ್ಯರ್ಥಿಗಳು ಕಡ್ಡಾಯವಾಗಿ ಈ ಕೆಳಗಿನ ದಾಖಲೆಗಳನ್ನು ಸಲ್ಲಿಸಬೇಕು.

1. ಸಿಇಟಿ-2023ಕ್ಕೆ ಭರ್ತಿ ಮಾಡಿ ಅಂತಿಮವಾಗಿ ಸಲ್ಲಿಸಿರುವ ಪ್ರತಿ
2. ಸಿಇಟಿ-2013 ರ ಮೂಲ ಪ್ರವೇಶ ಪತ್ರ
4. ಮಾನ್ಯತೆ ಇರುವ ಅಭ್ಯರ್ಥಿಯ ಭಾವಚಿತ್ರವುಳ್ಳ ಯಾವುದಾದರು ಒಂದು ಗುರುತಿನ ಚೀಟಿ (ಡ್ರೈವಿಂಗ್ ಲೈಸೆನ್ಸ್ / ಪಾಸ್ಪೋರ್ಟ್ / ಆಧಾರ್ ಕಾರ್ಡ್ / ಪಾನ್ ಕಾರ್ಡ್ / ಚುನಾವಣಾ ಗುರುತಿನ ಚೀಟಿ)
5. ಕರ್ನಾಟಕ ರಾಜ್ಯದಲ್ಲಿನ ಯಾವುದೇ ಸರ್ಕಾರಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವ, ಸಂಬಂಧಪಟ್ಟ ವಿಕಲತೆಯ ಕ್ಷೇತ್ರದಲ್ಲಿ ಸಕ್ಷಮರಾದ ವೈದ್ಯರು ನೀಡಿರುವ ವೈದ್ಯಕೀಯ ಪ್ರಮಾಣಪತ್ರ
6. ಕಿವುಡುತನದ ಸಮಸ್ಯೆಯಿಂದ ಬಳಲುತ್ತಿರುವ ವಿದ್ಯಾರ್ಥಿಗಳು, ಕಡ್ಡಾಯವಾಗಿ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ, ಮೈಸೂರು, ನಿಮ್ಹಾನ್ಸ್, ಬೆಂಗಳೂರು, ಮಣಿಪಾಲ್ ಆಸ್ಪತ್ರೆ/ ಸರ್ಕಾರಿ ವಾಕ್ ಮತ್ತು ಶ್ರವಣ ಸಂಸ್ಥೆ, ಲಿಂಗರಾಜಪುರಂ, ಬೆಂಗಳೂರು, ಇಲ್ಲಿಂದ ಪಡೆದ ಬಿಎಸ್ಇಆರ್ (ಜೈನ್ ಸೆಮ್ ವೋಕ್ಸ್ ರೆಸ್ಪಾನ್ಸ್) ಇತ್ತೀಚಿನ PTA + BERA Audiometry report ಶ್ರವಣಮಾಪನ ವರದಿ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read