ಮೆಡಿಕಲ್ ಕಾಲೇಜ್ ನಿರ್ಮಾಣ ಅಂದಾಜು ವೆಚ್ಚ 365 ಕೋಟಿಯಿಂದ 499 ಕೋಟಿಗೆ ಏರಿಕೆ: ಸಂಪುಟ ಒಪ್ಪಿಗೆ ಇಲ್ಲದೇ 129 ಕೋಟಿ ರೂ. ರಿಲೀಸ್: ಸಿಎಂ ತರಾಟೆ

ಹಾವೇರಿ: ಹಾವೇರಿ ಮೆಡಿಕಲ್ ಕಾಲೇಜು ನಿರ್ಮಾಣ ಅಂದಾಜು ವೆಚ್ಚ ಹೆಚ್ಚಳ ವಿಚಾರಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಿಎಂ ಸಿದ್ಧರಾಮಯ್ಯ ಬಳ್ಳಾರಿ ಮೂಲದ ಗುತ್ತಿಗೆದಾರ ಶ್ರೀನಿವಾಸ್ ನನ್ನು ಕಪ್ಪು ಪಟ್ಟಿಗೆ ಸೇರ್ಪಡೆ ಮಾಡುವಂತೆ ಸೂಚಿಸಿದ್ದಾರೆ.

ಹಾವೇರಿ ಕೆಡಿಪಿ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಅಂದಾಜು ವೆಚ್ಚ 365 ಕೋಟಿ ರೂ.ನಿಂದ 499 ಕೋಟಿ ರೂಪಾಯಿಗೆ ಹೇಗೆ ಹೆಚ್ಚಾಗಿದೆ? ಇದರ ಜವಾಬ್ದಾರಿ ಯಾರು? ಸಂಪುಟ ಸಭೆಯಲ್ಲಿ ಒಪ್ಪಿಗೆ ಆಗಿದೆಯಾ? ಸಂಪುಟ ಸಭೆಯ ಅನುಮತಿ ಪಡೆಯದೆ 129 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ. ಈ ರೀತಿ ಆಗಿದ್ದು ಹೇಗೆ ಎಂದು ಸಭೆಯಲ್ಲಿ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ.

ಈ ಬಗ್ಗೆ ತನಿಖೆ ನಡೆಸಲು ಎಸ್ಐಟಿಗೆ ಕೊಟ್ಟಿದ್ದೇವೆ. ನೀವೇ ಸಿಕ್ಕಿಹಾಕಿಕೊಳ್ಳೋದು ಎಂದು ಸಿಎಂ ಹೇಳಿದ್ದಾರೆ. ಈ ವೇಳೆ ನಾವು ಅಕ್ರಮ ಮಾಡಿಲ್ಲವೆಂದು ಮುಖ್ಯ ಇಂಜಿನಿಯರ್ ಮಂಜಪ್ಪ ತಿಳಿಸಿದ್ದು, 4 ವೈದ್ಯ ಕಾಲೇಜುಗಳ ನಿರ್ಮಾಣ ಸಂಬಂಧ ಎಸ್ಐಟಿ ತನಿಖೆಗೆ ನೀಡಿದ್ದೇವೆ. ಹಾವೇರಿ, ಚಿಕ್ಕಬಳ್ಳಾಪುರ, ಯಾದಗಿರಿ, ಚಿಕ್ಕಮಗಳೂರು ಮೆಡಿಕಲ್ ಕಾಲೇಜುಗಳ ತನಿಖೆ ನಡೆಸಲು ಎಸ್ಐಟಿಗೆ ವಹಿಸಿದ್ದು, ಅಕ್ರಮ ಎಸಗಿದ್ದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read