ಇವರೇ ನೋಡಿ ಐಷಾರಾಮಿ ‌ʼಆರ್ಟುರಾʼ ಕಾರ್ ಖರೀದಿಸಿದ ಭಾರತದ ಮೊದಲ ವ್ಯಕ್ತಿ….!

ಐಷಾರಾಮಿ ಫ್ಯಾಶನ್​ ಹೌಸ್​ ಪರ್ಪಲ್​ ಸ್ಟೈಲ್​​ ಲ್ಯಾಬ್ಸ್​​ ಸಂಸ್ಥಾಪಕ ಹಾಗೂ ಸಿಇಓ ಅಭಿಷೇಕ್​ ಅಗರ್​ವಾಲ್​ ಬರೋಬ್ಬರಿ 5.1 ಕೋಟಿ ರೂಪಾಯಿ ಮೌಲ್ಯದ ಮೆಕ್​ಲಾರೆನ್ಸ್​ ಆರ್ಟುರಾ ಕಾರನ್ನು ಖರೀದಿ ಮಾಡಿದ್ದು ಭಾರತದಲ್ಲಿ ಈ ಕಾರನ್ನು ಹೊಂದಿರುವ ಮೊದಲ ವ್ಯಕ್ತಿ ಎನಿಸಿದ್ದಾರೆ. ಮೇ ತಿಂಗಳಲ್ಲಿ ಬಿಡುಗಡೆಯಾದ ಈ ಕಾರು 5.1 ಕೋಟಿ ರೂಪಾಯಿ ಎಕ್ಸ್​ ಶೋರೂಂ ಬೆಲೆ ಹೊಂದಿದೆ.

ಭಾರತದಲ್ಲಿರುವ ಬ್ರಿಟೀಷ್​ ಆಟೋ ಕ್ಷೇತ್ರದ ದೈತ್ಯ ಕಂಪನಿ ಮೆಕ್ಲಾರೆನ್​​ ಮುಂಬೈನಲ್ಲಿಯೂ ತನ್ನ ಶಾಖೆಯನ್ನು ಹೊಂದಿದ್ದು ಅಭಿಷೇಕ್​ ಅಗರ್ವಾಲ್​​ರನ್ನು ನೆಕ್ಸ್ಟ್ ಜನರೇಷನ್​​ ಹೈಬ್ರಿಡ್​ ಸೂಪರ್​ ಕಾರ್​ ಅರ್ಟುರಾವನ್ನು ಹೊಂದಿರುವ ಮೊದಲ ಭಾರತೀಯ ಎಂದು ಘೋಷಿಸಿದೆ.

ದೇಶದ ಮೊದಲ ಮೆಕ್ಲಾರೆನ್​ ಆರ್ಟುರಾ ಹೈಬ್ರಿಡ್​ ಸೂಪರ್​ ಕಾರು, ಮುಂಬೈ ಮೂಲದ ಸಂಸ್ಥಾಪಕ ಹಾಗೂ ಸಿಇಓ ಅಭಿಷೇಕ್​ ಮಾಂಟಿ ಅರ್ಗರ್​ವಾಲ್​ರ ಗ್ಯಾರೆಜ್​ಗೆ ಇತ್ತೀಚಿಗೆ ಸೆರ್ಪಡೆಯಾಗಿದೆ ಎಂದು ಲಿಂಕ್ಡಿನ್​ನಲ್ಲಿ ಪೋಸ್ಟ್​ ಮಾಡಲಾಗಿದೆ.

ಈ ಮಾದರಿಯು ಹೊಸ, 3.0-ಲೀಟರ್ V6 ಟ್ವಿನ್-ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್‌ನಿಂದ ಚಾಲಿತವಾಗಿದ್ದು, 671 bhp (ಗರಿಷ್ಠ ಶಕ್ತಿ) ಮತ್ತು 720 Nm (ಗರಿಷ್ಠ ಟಾರ್ಕ್) ಸಂಯೋಜಿತ ವಿದ್ಯುತ್ ಉತ್ಪಾದನೆಯನ್ನು ನೀಡುತ್ತದೆ. ಎಂಜಿನ್ ಅನ್ನು 8-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ಗೆ ಜೋಡಿಸಲಾಗಿದೆ ಅದು ಹಿಂದಿನ ಚಕ್ರಕ್ಕೆ ಮಾತ್ರ ಶಕ್ತಿಯನ್ನು ಕಳುಹಿಸುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read