ಕಾಂಗ್ರೆಸ್ ನಾಯಕ ಎಂ.ಬಿ. ಪಾಟೀಲ್, ಕುಟುಂಬದವರ ಮೊಬೈಲ್ ಕಾಲ್ ಹಿಸ್ಟರಿ ಅಕ್ರಮ ಸಂಗ್ರಹ: ದೂರು

ಬೆಂಗಳೂರು: ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್ ಹಾಗೂ ಅವರ ಕುಟುಂಬ ಸದಸ್ಯರ ಫೋನ್ ಕರೆ ಹಿಸ್ಟರಿಯನ್ನು ಅಕ್ರಮವಾಗಿ ಸಂಗ್ರಹಿಸುತ್ತಿರುವ ಮಾಹಿತಿ ಇದ್ದು, ಅಂತವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ದೂರು ನೀಡಲಾಗಿದೆ.

ಬಬಲೇಶ್ವರ ಮತಕ್ಷೇತ್ರ ವ್ಯಾಪ್ತಿಯಲ್ಲಿ ದುರುದ್ದೇಶದಿಂದ ಎಂ.ಬಿ. ಪಾಟೀಲ್ ಮತ್ತು ಅವರ ಪತ್ನಿ ಆಶಾ ಎಂ. ಪಾಟೀಲ್, ಪುತ್ರ ಬಸನಗೌಡ ಎಂ. ಪಾಟೀಲ್, ಸಹೋದರ ವಿಧಾನಪರಿಷತ್ ಸದಸ್ಯ ಸುನಿಲ್ ಗೌಡ ಪಾಟೀಲ್, ಬಿ.ಎಲ್.ಡಿ.ಇ. ಸಂಸ್ಥೆ ಪ್ರಚಾರಾಧಿಕಾರಿ ಮಹಾಂತೇಶ್ ಬಿರಾದಾರ್ ಅವರ ಮೊಬೈಲ್ ಕರೆ ಹಿಸ್ಟರಿಗಳನ್ನು ಬೇರೆ ಬೇರೆ ಜಿಲ್ಲೆಗಳಿಂದ ತೆಗೆದುಕೊಳ್ಳಲಾಗುತ್ತಿದೆ ಎಂದು ಹೇಳಲಾಗಿದೆ.

ವಿಜಯಪುರ ಜಿಲ್ಲೆಯಲ್ಲಿ ಕರೆ ಹಿಸ್ಟರಿ ತೆಗೆಸಿದರೆ ಗೊತ್ತಾಗುತ್ತದೆ ಎನ್ನುವ ಕಾರಣಕ್ಕೆ ಬೆಳಗಾವಿ, ಬಾಗಲಕೋಟೆ, ಕಲಬುರ್ಗಿ ಮೊದಲಾದ ಜಿಲ್ಲೆಗಳಿಂದ ಎಂ.ಬಿ. ಪಾಟೀಲ್ ಮತ್ತು ಅವರ ಕುಟುಂಬ ಸದಸ್ಯರ ಕಾಲ್ ಹಿಸ್ಟರಿ ತೆಗೆಸಿಕೊಳ್ಳುತ್ತಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಪೊಲೀಸ್ ಮಹಾ ನಿರ್ದೇಶಕರಿಗೆ ದೂರು ನೀಡಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read