ಪ್ರಯಾಗರಾಜ್‌ನಲ್ಲಿ ನಡೆದ ಮಹಾಕುಂಭ ಮೇಳದಲ್ಲಿ ಗ್ರೀಸ್‌ನ ಮಹಿಳೆ ಮತ್ತು ಭಾರತೀಯ ವರನ ಮದುವೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಪೆನೆಲೋಪೆ ಎಂಬ ಗ್ರೀಕ್ ಮಹಿಳೆ ಸಿದ್ಧಾರ್ಥ ಎಂಬ ಭಾರತೀಯನನ್ನು ವಿವಾಹವಾಗಿದ್ದು, ಜುನಾ ಅಖಾಡದ ಮಹಾಮಂಡಲೇಶ್ವರ ಸ್ವಾಮಿ ಯತೀಂದ್ರನಂದ ಗಿರಿಯವರು ಕನ್ಯಾದಾನ ಮಾಡಿದ್ದಾರೆ.
ಈ ವಿವಾಹದ ಫೋಟೋಗಳು ಮತ್ತು ವೀಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಈ ದಂಪತಿಗೆ ಶುಭಾಶಯ ಕೋರಿದ್ದಾರೆ. ಪೆನೆಲೋಪೆ ಸನಾತನ ಧರ್ಮವನ್ನು ನಂಬುತ್ತಾರೆ ಮತ್ತು ಭಾರತೀಯ ಸಂಸ್ಕೃತಿಯನ್ನು ಅಳವಡಿಸಿಕೊಂಡಿದ್ದಾರೆ ಎಂದು ಅನೇಕರು ಪ್ರತಿಕ್ರಿಯಿಸಿದ್ದಾರೆ. ಮೆಹಂದಿ ಮತ್ತು ಇತರ ವಿವಾಹ ಕಾರ್ಯಕ್ರಮಗಳಲ್ಲಿ ಪೆನೆಲೋಪೆ ಸಂತಸದಿಂದ ಭಾಗವಹಿಸಿದ್ದರು.
ಸಿದ್ಧಾರ್ಥ್ ಮಾತನಾಡುತ್ತಾ, ಮಹಾಕುಂಭದಲ್ಲಿ ಮದುವೆಯಾಗಲು ನಾವು ನಿರ್ಧರಿಸಿದ್ದೆವು ಎಂದಿದ್ದಾರೆ. ಇದು ಸರಳ ಮತ್ತು ದೈವಿಕವಾಗಿರಬೇಕು ಎಂದು ನಾವು ಬಯಸಿದ್ದೆವು ಎಂದಿದ್ದಾರೆ.