ಕಲಬುರಗಿ: ರಾಜ್ಯದಲ್ಲಿ ಬಾಣಂತಿಯರ ಸಾವಿನ ಪ್ರಕರಣ ಮತ್ತೆ ಮುಂದುವರೆದಿದೆ. ಮಗುವಿಗೆ ಜನ್ಮ ನೀಡಿದ ಕೆಲವೇ ಸಮಯದಲ್ಲಿ ತಾಯಿ ಸಾವನ್ನಪ್ಪಿರುವ ದಾರುಣ ಘಟನೆ ಕಲಬುರಗಿ ಜಿಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ.
22 ವರ್ಷದ ಶ್ರೀದೇವಿ ಮೃತ ಬಾಣಂತಿ. ಹೆರಿಗೆಗೆಂದು ದಾಖಲಾಗಿದ್ದ ಶ್ರೀದೇವಿ ಮಗುವಿಗೆ ಜನ್ಮ ನೀಡಿದ ಕೆಲ ಸಮಯದಲ್ಲೇ ತೀವ್ರ ಅಸ್ವಸ್ಥಳಾಗಿ ಕೊನೆಯುಸಿರೆಳೆದಿದ್ದಾಳೆ.
ವೈದ್ಯರ ನಿರ್ಲಕ್ಷವೇ ಶ್ರೀದೇವಿ ಸಾವಿಗೆ ಕಾರಣ ಎಂದು ಕುಟುಂಬದವರು ಆಕ್ರೀಶ ವ್ಯಕ್ತಪಡಿಸಿದ್ದಾರೆ. ವೈದ್ಯರು ಸರಿಯಾಗಿ ಚಿಕಿತ್ಸೆ ನೀಡಿಲ್ಲ. ಜಿಮ್ಸ್ ಆಸ್ಪತ್ತೆಯ ವೈದ್ಯರ ನಿರ್ಲಕ್ಷ್ಯದಿಂದಾಗಿಯೇ ಬಾಣಮ್ತಿ ಸಾವನ್ನಪ್ಪಿದ್ದಾಳೆ ಎಂದು ಪೋಷಕರು ಆರೋಪಿಸಿದ್ದಾರೆ.