ಬೆಂಗಳೂರು : ಬೆಂಗಳೂರಿನ ಪೊಲೀಸರು ನಗರದ ವಿವಿಧೆಡೆ ಭರ್ಜರಿ ಕಾರ್ಯಾಚರಣೆ ನಡೆಸಿ ಇದುವರೆಗೆ ಬರೋಬ್ಬರಿ 117 ಕೋಟಿ ರೂ. ಮೌಲ್ಯದ 6261 ಕೆ.ಜಿ ಮಾದಕ ವಸ್ತು ಗಳನ್ನು ವಶಪಡಿಸಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ
ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು 6191 ಪ್ರಕರಣಗಳನ್ನು ದಾಖಲಿಸಿ, 117 ಕೋಟಿ ರೂ. ಮೌಲ್ಯದ 6261 ಕೆ.ಜಿ ಮಾದಕ ವಸ್ತು ಗಳನ್ನು ವಶಪಡಿಸಿಕೊಳ್ಳಲಾಗಿದೆ. ಒಂದು ವರ್ಷದ ಅವಧಿಯಲ್ಲಿ ಈ ಪ್ರಕರಣಗಳಲ್ಲಿ 7723 ಭಾರತೀಯರು ಮತ್ತು 159 ವಿದೇಶಿ ಪ್ರಜೆಗಳನ್ನು ಬಂಧಿಸಲಾಗಿದೆ.ಡ್ರಗ್ ಪೆಡ್ಡರ್ ಗಳ ಮೇಲೆ 943 ಪ್ರಕರಣ ಹಾಗೂ ಡ್ರಗ್ ಸೇವನೆ ಮಾಡುವವರ ವಿರುದ್ಧ 5248 ಪ್ರಕರಣ ದಾಖಲಿಸಲಾಗಿದೆ
.ಮಾದಕ ವಸ್ತುಗಳ ಸೇವನೆ ಮತ್ತು ಕಳ್ಳ ಸಾಗಾಣಿಕೆ ವಿರುದ್ಧ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. 388 ಶಾಲೆಗಳು ಹಾಗೂ 253 ಕಾಲೇಜುಗಳಿಗೆ ಭೇಟಿ ನೀಡಿದ ಪೊಲೀಸರು ವಿದ್ಯಾರ್ಥಿಗಳಿಗೆ ಮಾದಕ ವಸ್ತು ದ್ರವ್ಯಗಳ ಈ ಸೇವನೆಯಿಂದ ಆಗುವ ಹಾನಿ ಬಗ್ಗೆ ಅರಿವು ಮೂಡಿಸಿದ್ದಾರೆ.