BREAKING: ವಡೋದರಾ ಐಒಸಿಎಲ್ ಸಂಸ್ಕರಣಾಗಾರದಲ್ಲಿ ಭಾರಿ ಸ್ಫೋಟ, ಬೆಂಕಿ

ಗುಜರಾತ್‌ನ ವಡೋದರಾದ ಕೊಯಾಲಿ ಪ್ರದೇಶದಲ್ಲಿ ಐಒಸಿಎಲ್‌ನ ಸಂಸ್ಕರಣಾಗಾರದಲ್ಲಿ ಸೋಮವಾರ ಭಾರಿ ಸ್ಫೋಟ ಸಂಭವಿಸಿದೆ.

ರಿಫೈನರಿಯ ಶೇಖರಣಾ ತೊಟ್ಟಿಯಲ್ಲಿ ಸ್ಫೋಟ ಸಂಭವಿಸಿದೆ. ಸ್ಫೋಟದ ನಂತರ ಕಿಲೋಮೀಟರ್ ದೂರದವರೆಗೂ  ಹೊಗೆಯ ಮೋಡ, ಸಂಸ್ಕರಣಾಗಾರದಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದೆ.

ಸ್ಥಳೀಯ ಆಡಳಿತವು ಬೆಂಕಿಯನ್ನು ನಿಯಂತ್ರಿಸಲು ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ. ಬೆಂಕಿಯನ್ನು ನಂದಿಸಲು 10 ಅಗ್ನಿಶಾಮಕ ವಾಹನಗಳೊಂದಿಗೆ ಧಾವಿಸಿದೆ. ಸ್ಫೋಟ ಮತ್ತು ನಂತರದಲ್ಲಿ ಬೃಹತ್ ಬೆಂಕಿಯು ಸುತ್ತಮುತ್ತಲಿನ ಕಂಪನಿಗಳು ಮತ್ತು ಪ್ರದೇಶಗಳಲ್ಲಿ ಆತಂಕ ಸೃಷ್ಟಿಸಿದೆ. ಬೆಂಕಿಯ ನಂತರ ಸಂಸ್ಕರಣಾಗಾರದಲ್ಲಿದ್ದ ಕಾರ್ಮಿಕರನ್ನು ಸ್ಥಳಾಂತರಿಸಲಾಗಿದ್ದು, ಬೆಂಕಿ ನಂದಿಸಲು ಸಮರೋಪಾದಿಯಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read