ಇಸ್ಲಾಮಾಬಾದ್ : ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿಯಾದ ಮರಿಯಮ್ ನವಾಜ್ ಅವರ ವೀಡಿಯೊ ವೈರಲ್ ಆಗಿದೆ.
ಮರಿಯಮ್ ನವಾಜ್ ಅವರು ತಮ್ಮ ತಂದೆ ನವಾಜ್ ಷರೀಫ್ ಅವರ ಪಾದ ಮುಟ್ಟಿ ಆಶೀರ್ವಾದ ಪಡೆಯುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವರದಿಯ ಪ್ರಕಾರ, ಈ ವೀಡಿಯೊ ಪಂಜಾಬ್ ವಿಧಾನಸಭೆಯಲ್ಲಿ ಮರಿಯಮ್ ನವಾಜ್ ಮುಖ್ಯಮಂತ್ರಿ ಚುನಾವಣೆಯಲ್ಲಿ ಗೆದ್ದು ನಂತರ ತನ್ನ ತಂದೆಯನ್ನು ಭೇಟಿಯಾಗಲು ಹೋದ ಸಮಯದದ್ದಾಗಿದೆ.
یہ رسم کس مذہب میں ہے؟ pic.twitter.com/sRApACcbdW
— Hamid Mir 𝓯𝓪𝓷𝓼 (@Hamidmir01) February 26, 2024
ಮರಿಯಮ್ ನವಾಜ್ ವಿಡಿಯೋ ವೈರಲ್
ಪಾಕಿಸ್ತಾನದ ಹಿರಿಯ ಪತ್ರಕರ್ತ ಹಮೀದ್ ಮಿರ್ ಅವರು ಫೆಬ್ರವರಿ 26ರಂದು ಮರಿಯಮ್ ನವಾಜ್ ಅವರ ಈ ವಿಡಿಯೋವನ್ನು ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಹಂಚಿಕೊಂಡಿದ್ದು, ‘ಈ ಸಂಪ್ರದಾಯ ಯಾವ ಧರ್ಮದಲ್ಲಿದೆ?’ ಎಂದು ಪ್ರಶ್ನಿಸಿದ್ದಾರೆ.
ಈ ವೀಡಿಯೊದಲ್ಲಿ, ಮರಿಯಮ್ ನವಾಜ್ ತನ್ನ ತಂದೆ ನವಾಜ್ ಷರೀಫ್ ಅವರ ಪಾದಗಳಿಗೆ ನಮಸ್ಕರಿಸುತ್ತಿದ್ದಾರೆ ಮತ್ತು ನವಾಜ್ ಷರೀಫ್ ಕೂಡ ತಮ್ಮ ಮಗಳನ್ನು ಬೆನ್ನಿಗೆ ತಟ್ಟುವ ಮೂಲಕ ಆಶೀರ್ವದಿಸುತ್ತಿದ್ದಾರೆ.