ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ ಮಾರುತಿ ಜಿಮ್ನಿ ಥಂಡರ್, ಬೆಲೆ 11 ಲಕ್ಷಕ್ಕಿಂತಲೂ ಕಡಿಮೆ…!

ಮಾರುತಿ ಸುಜುಕಿ ಬಹು ನಿರೀಕ್ಷಿತ ಜಿಮ್ನಿ ಥಂಡರ್ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಜಿಮ್ನಿ ಥಂಡರ್‌ನ ಆರಂಭಿಕ ಬೆಲೆ 10.74 ಲಕ್ಷ ರೂಪಾಯಿ ಇದೆ. ಈ ಆವೃತ್ತಿಯಲ್ಲಿ ಹಲವು ವೈಶಿಷ್ಟ್ಯಗಳಿವೆ. ಈ ಆವೃತ್ತಿಯನ್ನು ಸೀಮಿತ ಅವಧಿಗೆ ಮಾರುಕಟ್ಟೆಯಲ್ಲಿ ಲಭ್ಯವಾಗುವಂತೆ ಮಾಡಲಾಗಿದೆ.

ಜಿಮ್ನಿ ಥಂಡರ್‌ ವಿಶೇಷ ಫೀಚರ್ಸ್‌

ಜಿಮ್ನಿ ಥಂಡರ್‌, K15B 1.5-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಇದು 105 bhp ಮತ್ತು 134.2 Nm ಟಾರ್ಕ್ ಉತ್ಪಾದಿಸುತ್ತದೆ. ಗ್ರಾಹಕರಿಗೆ 5-ಸ್ಪೀಡ್ ಮ್ಯಾನುವಲ್ ಮತ್ತು 4-ಸ್ಪೀಡ್ ಸ್ವಯಂಚಾಲಿತ ರೂಪಾಂತರಗಳು ಲಭ್ಯವಿವೆ. ಇದರ ಕಾರ್ಯಕ್ಷಮತೆ ಅದ್ಭುತವಾಗಿದೆ. 4L ಮೋಡ್ ಕೂಡ ಥಂಡರ್‌ನಲ್ಲಿದೆ.

ಜಿಮ್ನಿ ಥಂಡರ್‌ನ ವಿನ್ಯಾಸ ಕೂಡ ವಿಶಿಷ್ಟವಾಗಿಯೇ ಇದೆ. ಮುಂಭಾಗದ ಬಂಪರ್ ಗಾರ್ನಿಶ್, ಸ್ಕಿಡ್ ಪ್ಲೇಟ್, ಸೈಡ್ ಡೋರ್ ಕ್ಲಾಡಿಂಗ್, ಡೋರ್ ವೈಸರ್ ಮತ್ತು ಇತರ ಡಿಸೈನ್‌ಗಳು ಗಮನ ಸೆಳೆಯುತ್ತವೆ. ಥಂಡರ್ ಆವೃತ್ತಿಯು ಒಳಾಂಗಣ ಶೈಲಿಯ ಕಿಟ್, ಡಿಸೈನರ್ ಮ್ಯಾಟ್ಸ್ ಅತ್ಯುತ್ತಮ ಸೌಕರ್ಯಗಳನ್ನೂ ಒದಗಿಸುತ್ತವೆ.

ಎಲ್‌ಇಡಿ ಪ್ರೊಜೆಕ್ಟರ್ ಲ್ಯಾಂಪ್‌ಗಳು, ವೈರ್‌ಲೆಸ್ ಆಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋವನ್ನು ಬೆಂಬಲಿಸುವ 9-ಇಂಚಿನ ಸ್ಮಾರ್ಟ್‌ಪ್ಲೇ ಪ್ರೊ+ ಸಿಸ್ಟಮ್ , 6 ಏರ್‌ಬ್ಯಾಗ್‌ಗಳು, ಎಬಿಎಸ್, ಇಬಿಡಿ ಮತ್ತು ಇಎಸ್‌ಪಿ ಸೇರಿದಂತೆ ಸುರಕ್ಷತಾ ವೈಶಿಷ್ಟ್ಯಗಳ ಸೂಟ್ ಮೂಲಕ ಜಿಮ್ನಿ ಗ್ರಾಹಕರನ್ನು ಸೆಳೆಯುತ್ತಿದೆ.

ಥಂಡರ್ ಆವೃತ್ತಿಯು ಎಲ್ಲಾ ರೂಪಾಂತರಗಳಲ್ಲಿ ಲಭ್ಯವಿದೆ. Zeta ಮಾಡೆಲ್‌ ಮೇಲೆ 2 ಲಕ್ಷ ರೂಪಾಯಿ ಡಿಸ್ಕೌಂಟ್‌ ಕೂಡ ಸಿಗ್ತಿದೆ. ಈ ಮಾಡೆಲ್‌ ಜೊತೆಗೆ ಗ್ರಾಹಕರು ಆಕ್ಸೆಸರಿ ಕಿಟ್ ಅನ್ನು ಪಡೆಯುತ್ತಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read