ಮಂಗಳಮುಖಿಯರು ಇದಕ್ಕೆ ಅಸ್ತು ಎಂದ್ರೆ ಬದಲಾಗುತ್ತೆ ನಿಮ್ಮ ʼಅದೃಷ್ಟʼ

ಸುಖ ಜೀವನಕ್ಕೆ ಆರೋಗ್ಯದ ಜೊತೆ ಹಣ ಅಗತ್ಯ. ಹಣದ ಅಭಾವದಿಂದ ಬಳಲುವ ವ್ಯಕ್ತಿ ಒಂದಲ್ಲ ಒಂದು ಸಮಸ್ಯೆ ಎದುರಿಸುತ್ತಾನೆ. ಜಗತ್ತಿನ ಪ್ರತಿಯೊಬ್ಬ ವ್ಯಕ್ತಿಯೂ ಶ್ರೀಮಂತನಾಗಲು ಬಯಸುತ್ತಾನೆ. ಬೇಡಿದ್ದೆಲ್ಲ ಸಿಗಬೇಕು ಎಂದು ಪ್ರಾರ್ಥನೆ ಮಾಡ್ತಾನೆ. ಇದಕ್ಕೆ ಅದೃಷ್ಟ ಹಾಗೂ ಲಕ್ಷ್ಮಿ ಕೃಪೆ ಅಗತ್ಯವಾಗುತ್ತದೆ.

ಐಷಾರಾಮಿ ಕಾರು, ಮನೆ ಯಾರಿಗೆ ಬೇಡ. ಪ್ರತಿಯೊಬ್ಬರಿಗೂ ಅವ್ರು ಬಯಸಿದ ವಸ್ತುಗಳು ಸಿಗುವುದಿಲ್ಲ. ಮನೆಗೆ ಬಂದ ಮಂಗಳಮುಖಿ ನಿಮ್ಮ ಆಸೆಯನ್ನು ಈಡೇರಿಸುವ ಶಕ್ತಿ ಹೊಂದಿರುತ್ತಾಳೆ. ಹೌದು, ನಿಮ್ಮ ಮನೆಗೆ ಮಂಗಳ ಮುಖಿ ಬಂದಾಗ ನಿಮ್ಮ ಆಸೆಯನ್ನು ಅವ್ರ ಮುಂದೆ ಹೇಳಿ. ಅವ್ರು ಅದಕ್ಕೆ ಅಸ್ತು ಎಂದ್ರೆ ನಿಮ್ಮ ಆಸೆ ಈಡೇರಿದಂತೆ.

ಲಕ್ಷ್ಮಿ ಪೂಜೆಗೆ ಬಳಸುವ ಅಕ್ಷತೆ ಕೂಡ ನಿಮ್ಮ ಅದೃಷ್ಟ ಬದಲಿಸುತ್ತದೆ. ಲಕ್ಷ್ಮಿ ಪೂಜೆ, ಆರಾಧನೆ ನಂತ್ರ ಅಕ್ಷತೆಯನ್ನು ಲಕ್ಷ್ಮಿಗೆ ಹಾಕಲಾಗುತ್ತದೆ. ಈ ಅಕ್ಷತೆ ವಿಶೇಷವಾಗಿರುತ್ತದೆ. ಪೂಜೆ ನಂತ್ರ ಹಾಕುವ ಅಕ್ಷತೆಯ 21 ಕಾಳುಗಳನ್ನು ಪೇಪರ್ ನಲ್ಲಿ ಕಟ್ಟಿ ಪರ್ಸ್ ನಲ್ಲಿ ಇಟ್ಟುಕೊಳ್ಳಿ. ಇದು ಧನ ಲಾಭಕ್ಕೆ ಕಾರಣವಾಗುತ್ತದೆ.

ಅಶ್ವತ್ಥ ಮರದ ಎಲೆಯನ್ನು ಗಂಗೆಯಲ್ಲಿ ತೊಳೆದು ಪವಿತ್ರಗೊಳಿಸಬೇಕು. ನಂತ್ರ ಅದ್ರ ಮೇಲೆ ಕೇಸರಿಯಲ್ಲಿ ಶ್ರೀ ಎಂದು ಬರೆಯಬೇಕು. ಇದನ್ನು ಯಾರ ಕಣ್ಣಿಗೂ ಕಾಣದಂತೆ ಪರ್ಸ್ ಗುಪ್ತ ಸ್ಥಳದಲ್ಲಿ ಇಟ್ಟುಕೊಳ್ಳಿ. ಸಂಪತ್ತು ವೃದ್ಧಿಗೆ ಇದು ಕಾರಣವಾಗುತ್ತದೆ.

ಮಂಗಳಮುಖಿ ನೀಡಿದ ಹಣ ಕೂಡ ನಿಮ್ಮ ಅದೃಷ್ಟ ಬದಲಿಸಬಲ್ಲದು. ನೀವು ಮಂಗಳಮುಖಿಗೆ ಹಣ ನೀಡಿದ್ದು, ಅದ್ರಲ್ಲಿ ಒಂದು ನಾಣ್ಯವನ್ನು ಮಂಗಳಮುಖಿ ನಿಮಗೆ ವಾಪಸ್ ನೀಡಿದ್ರೆ ಶುಭವಾಗುತ್ತದೆ. ಅದನ್ನು ಹಸಿರು ಬಟ್ಟೆಯಲ್ಲಿ ಕಟ್ಟಿ ಕಪಾಟಿನಲ್ಲಿಡಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read