ಮದುವೆ ಮನೆಯಲ್ಲಿ ಊಟ ಮಾಡಿ ದೃಷ್ಟಿ ಕಳೆದುಕೊಂಡ ವ್ಯಕ್ತಿ

ಬೆಳಗಾವಿ: ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಗ್ರಾಮದಲ್ಲಿ ನಡೆದ ಮದುವೆಯಲ್ಲಿ ಕಲುಷಿತ ಆಹಾರ ಸೇವಿಸಿದ ವ್ಯಕ್ತಿಯೊಬ್ಬ ದೃಷ್ಟಿ ಕಳೆದುಕೊಂಡಿದ್ದಾರೆ. ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

37 ವರ್ಷದ ಬಾಬಾ ಸಾಬ್ ಕುತುಮುದ್ದೀನ್ ಬೇಗ್ ಅವರಿಗೆ ಕುರುಡುತನ ಉಂಟಾಗಿದೆ. ಮದುವೆಯಲ್ಲಿ ಊಟ ಮಾಡಿದ ನಂತರ 162 ಜನರಿಗೆ ವಾಂತಿ ಭೇದಿ ಶುರುವಾಗಿದ್ದು, ಚಿಕ್ಕೋಡಿ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿತ್ತು, ಬಾಬಾಸಾಬ್ ಅವರು ಕೂಡ ಚಿಕ್ಕೋಡಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಬುಧವಾರ ಅವರಿಗೆ ಏಕಾಏಕಿ ದೃಷ್ಟಿ ಕ್ಷೀಣಿಸಿದೆ.

ವಿಪರೀತ ವಾಂತಿ ಭೇದಿಯಿಂದ ದೇಹದಲ್ಲಿ ನಿರ್ಜಲೀಕರಣವಾಗಿದ್ದು, ಇದರಿಂದ ರಕ್ತ ಹೆಪ್ಪುಗಟ್ಟಿ ಕಣ್ಣಿನ ನರಗಳು ವೀಕ್ ಆಗಿರಬಹುದು. ಸದ್ಯಕ್ಕೆ ಅವರಿಗೆ ಕಣ್ಣು ಕಾಣಿಸುತ್ತಿಲ್ಲ. ಪೂರ್ಣ ಪ್ರಮಾಣದಲ್ಲಿ ತಪಾಸಣೆ ನಡೆಸಿದ ನಂತರ ಕಾರಣ ಗೊತ್ತಾಗಲಿದೆ ಎಂದು ಜಿಲ್ಲಾಸ್ಪತ್ರೆಯ ನೇತ್ರ ವಿಭಾಗದ ಡಾ. ಎ.ಬಿ. ಪಾಟೀಲ ಮಾಹಿತಿ ನೀಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read