ಗರ್ಭಪಾತಕ್ಕೆ ಕರೆ ತಂದ ಪ್ರಿಯಕರನ ಥಳಿಸಿ ತಾಳಿ ಕಟ್ಟಿಸಿಕೊಂಡ ಯುವತಿ

ಚಿಕ್ಕಬಳ್ಳಾಪುರ: ಪ್ರೀತಿಸಿ ಕೈ ಕೊಟ್ಟು ಪರಾರಿಯಾಗಲು ಯತ್ನಿಸಿದ ಪ್ರಿಯಕರನನ್ನು ಹಿಗ್ಗಾಮುಗ್ಗಾ ಥಳಿಸಿದ ಪ್ರಿಯತಮೆ ಆತನ ಕೈಯಿಂದಲೇ ತಾಳಿ ಕಟ್ಟಿಸಿಕೊಂಡ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟದ ಪ್ರವಾಸಿ ಮಂದಿರದಲ್ಲಿ ನಡೆದಿದೆ.

ಶಿಡ್ಲಘಟ್ಟ ತಾಲೂಕಿನ ಚಿಕ್ಕಕಿರಿಗಿಂಬಿ ಗ್ರಾಮದ ಚೇತನ್ ಮತ್ತು ಇಟಪ್ಪನಹಳ್ಳಿಯ ವನಿತಾ ಎರಡು ವರ್ಷಗಳಿಂದ ಪ್ರೀತಿಸಿದ್ದು, ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಬಂಧ ಬೆಳೆಸಿದ್ದ. ವನಿತಾ ಆರು ತಿಂಗಳ ಗರ್ಭಿಣಿಯಾಗಿದ್ದು, ಈ ವಿಷಯ ತಿಳಿದ ಚೇತನ್ ಶಿಡ್ಲಘಟ್ಟ ಆಸ್ಪತ್ರೆಗೆ ಗರ್ಭಪಾತ ಮಾಡಿಸಲು ಕರೆದುಕೊಂಡು ಬಂದಿದ್ದಾನೆ.

ಗರ್ಭಪಾತಕ್ಕೆ ವನಿತಾ ಒಪ್ಪದಿದ್ದಾಗ ಪರಾರಿಯಾಗಲು ಯತ್ನಿಸಿದ್ದಾನೆ. ಇದರಿಂದ ಸಿಟ್ಟಾದ ವನಿತಾ ಆತನನ್ನು ಹಿಡಿದು ಥಳಿಸಿ ದಲಿತ ಸಂಘಟನೆಗಳು ಮತ್ತು ಮಹಿಳಾ ಸಂಘಟನೆಗಳ ಸಮ್ಮುಖದಲ್ಲಿ ತಾಳಿ ಕಟ್ಟಿಸಿಕೊಂಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read