ಗುವಾಹಟಿ: ಮಣಿಪುರದಲ್ಲಿ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಭದ್ರತಾ ಪಡೆಗಳು ಕಳೆದರಡು ದಿನಗಳಿಂದ ನಡೆಸಿದ ಕಾರ್ಯಾಚರಣೆಯಲ್ಲಿ 328 ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದಿದೆ.
151 ಎಸ್ ಎಲ್ ಆರ್ ರೈಫಲ್, 65 ಐಎನ್ ಎಸ್ ಎ ಎಸ್ ರೈಫಲ್, 6 ಎಕೆ-47 ಸರಣಿ ರೈಫಲ್, 73 ಇತರ ರೈಫಲ್ ಗಳು ಒಂದು ಮಾರ್ಟರ್ ಶೆಲ್ ಹಾಗೂ ಐದು ಕಾರ್ಬೈನ್ ಬಂದೂಕು , ಬೃಹತ್ ಪ್ರಮಾಣದ ಮದ್ದುಗುಂಡುಗಳು, ಇತರ ಉಪಕರಣಗಳು ಸೇರಿದಂತೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ.
ಮೈತೇಯಿ ಪ್ರಾಂತದ ಕಣಿವೆ ಜಿಲ್ಲೆಗಳಾದ ಇಂಫಾಲ್ ಪೂರ್ವ, ಪ್ಂಫಾಲ್ ಪಶ್ಚಿಮ, ಬಿಷ್ಣುಪುರ, ತೌಬಾಲ್ ಮತ್ತು ಕಾಕ್ ಚಿಂಗ್ ನ ಹೊರವಲಯದಲ್ಲಿ ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಖನ್ನು ಸಂಗ್ರಹಿಸಲಾಗಿದೆ ಎಂದು ಮಣಿಪುರ ಪೊಲೀಸರು ತಿಳಿಸಿದ್ದಾರೆ.