BIG NEWS: ಮಣಿಪುರದಲ್ಲಿ ಮತ್ತೆ ತೀವ್ರಗೊಂಡ ಹಿಂಸಾಚಾರ; ಐವರು ನಾಗರಿಕರ ಬರ್ಬರ ಹತ್ಯೆ

ಮಣಿಪುರದಲ್ಲಿ ಹಿಂಸಾಚಾರ ಮುಂದುವರೆದಿದೆ. ಅಪರಿಚಿತ ದುಷ್ಕರ್ಮಿಗಳು ಐವರು ನಾಗರಿಕರನ್ನು ಹತ್ಯೆ ಮಾಡಿದ್ದಾರೆ.

ಪೊಲೀಸರು ನೀಡಿರುವ ಮಾಹಿತಿ ಪ್ರಕಾರ ಬಿಷ್ಣುಪುರ ಜಿಲ್ಲೆಯ ನಿಂಗ್ ತೌಖೋಂಗ್ ಖಾ ಖುನೌದಲ್ಲಿ ನಾಲ್ವರು ನಾಗರಿಕರು ಹಾಗೂ ಕಾಂಗ್ ಪೋಕ್ಸಿ ಜಿಲ್ಲೆಯ ಕಾಂಗ್ ಚುಪ್ ಚಿಂಗ್ ಖಾಂಗ್ ನಲ್ಲಿ ಓರ್ವರನ್ನು ಹತ್ಯೆ ಮಾಡಲಾಗಿದೆ. ಸಸ್ತ್ರಸಜ್ಜಿತ ಗುಂಪೊಂದು ಈ ಕೃತ್ಯವೆಸಗಿದೆ.

ಮೃತರನ್ನು ಓಯಿನಮ್ ಬಮೊನ್ ಜಾವೋ ಹಾಗೂ ಅವರ ಮಗ ಓಯಿನಮ್ ಮಣಿತೊಂಬ ಸಿಂಗ್, ಥಿಯಂ ಸೋಮೇಂದ್ರೋ ಸಿಂಗ್ ಹಾಗೂ ನಿಂಗ್ ತೌಜಮ್ ಎಂದು ಗುರುತಿಸಲಾಗಿದೆ. ಕಾಂಗ್ ಪೋಸ್ಟ್ ನಲ್ಲಿ ಮೃತಪಟ್ಟವರನ್ನು ಥಿಯಮ್ ಕೊಂಜಿನ್, ಮನೋರಂಜನ್ ಎಂದು ಗುರುತಿಸಲಾಗಿದೆ. ಆರೋಪಿಗಳ ಪತ್ತೆಗೆ ಹುಡುಕಾಟ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read