ಮಣಿಪುರದಲ್ಲಿ ಮತ್ತೊಂದು ಬೆಚ್ಚಿ ಬೀಳಿಸುವ ಘಟನೆ: ಶಿಕ್ಷಕಿ ಮೇಲೆ ಅತ್ಯಾಚಾರ ಎಸಗಿ ಸಜೀವದಹನ

ಮಣಿಪುರದ ಜಿರಿಬಾಮ್ ಜಿಲ್ಲೆಯ ಬುಡಕಟ್ಟು ಗ್ರಾಮದಲ್ಲಿ 31 ವರ್ಷದ ಮಹಿಳೆ ಮೇಲೆ ಉಗ್ರಗಾಮಿಗಳು ಅತ್ಯಾಚಾರ ಎಸಗಿ ಜೀವಂತ ಸುಟ್ಟು ಹಾಕಿದ್ದಾರೆ.

ಗುರುವಾರ ರಾತ್ರಿ ಉಗ್ರರು ಗ್ರಾಮದ ಮೇಲೆ ದಾಳಿ ನಡೆಸಿದ ಬಳಿಕ ಈ ಘಟನೆ ನಡೆದಿದೆ. ಮಹಿಳೆ ಮೂರು ಮಕ್ಕಳ ತಾಯಿಯಾಗಿದ್ದು, ಗ್ರಾಮದ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಳು. ಗ್ರಾಮದಲ್ಲಿ ಹ್ಮಾರ್ ಸಮುದಾಯದ ಸದಸ್ಯರು ಪ್ರಾಬಲ್ಯ ಹೊಂದಿದ್ದಾರೆ.

ಮಹಿಳೆಯ ಪತಿ ದೂರು ದಾಖಲಿಸಿದ್ದು, ಬೆಂಕಿ ಹಚ್ಚುವ ಮುನ್ನ ಆಕೆಯ ಮೇಲೆ ಅತ್ಯಾಚಾರ ಎಸಗಲಾಗಿದೆ ಎಂದು ಆರೋಪಿಸಿದ್ದಾರೆ. ಗ್ರಾಮದಲ್ಲಿ ಸಮರ್ಪಕ ಸೌಲಭ್ಯಗಳಿಲ್ಲದ ಕಾರಣ ಬಲಿಪಶುವಿನ ಅವಶೇಷಗಳನ್ನು ವಿಧಿವಿಜ್ಞಾನ ಪರೀಕ್ಷೆಗಾಗಿ ಅಸ್ಸಾಂನ ಸಿಲ್ಚಾರ್‌ಗೆ ಪೊಲೀಸರು ಕಳಿಸಿದ್ದಾರೆ.

ನವೆಂಬರ್ 7 ರಂದು ರಾತ್ರಿ ಜೈರೋಲ್ಪೋಕ್ಪಿ(ಜೈರೌನ್), ಜಿರಿಬಾಮ್‌ನಲ್ಲಿರುವ ಅವರ ನಿವಾಸದಲ್ಲಿ ಸಂಪೂರ್ಣ ಶಸ್ತ್ರಸಜ್ಜಿತವಾಗಿ ಬಂದ ಗುಂಪು ಅವರ ಪತ್ನಿ ಮೇಲೆ ಅತ್ಯಾಚಾರ ಎಸಗಿ ಜೀವಂತ ಸುಟ್ಟು ಬರ್ಬರವಾಗಿ ಹತ್ಯೆ ಮಾಡಿದೆ. ಮೈಥಿ ಉಗ್ರಗಾಮಿಗಳು. ನನ್ನ ಮನೆಯನ್ನು ಲೂಟಿ ಮಾಡಿ ಸುಟ್ಟುಹಾಕಿದ್ದಾರೆ ಎಂದು ವ್ಯಕ್ತಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ವ್ಯಕ್ತಿಯ ದೂರಿನ ನಂತರ ಜಿರಿಬಾಮ್ ಪೊಲೀಸರು ಪ್ರಕರಣವನ್ನು ದಾಖಲಿಸಿದ್ದಾರೆ. ಜಿರಿಬಾಮ್ ಎಸ್ಪಿ ಖಮ್ನಮ್ ರಾಬಿನ್ಸನ್ ಸಿಂಗ್ ಶುಕ್ರವಾರ ಜಿಲ್ಲಾಧಿಕಾರಿ ಕೃಷ್ಣ ಕುಮಾರ್ ಅವರಿಗೆ ಮಾಹಿತಿ ನೀಡಿದ್ದಾರೆ.

ದಾಳಿಕೋರರು ಶಸ್ತ್ರಾಸ್ತ್ರಗಳೊಂದಿಗೆ ಗ್ರಾಮಕ್ಕೆ ನುಗ್ಗಿ ಗ್ರಾಮಸ್ಥರನ್ನು ಭಯಭೀತಗೊಳಿಸಿದ್ದರು. ದಾಳಿಕೋರರು ಸಮುದಾಯದೊಂದಿಗೆ ಗುಂಡಿನ ಚಕಮಕಿಯ ನಂತರ 17 ಮನೆಗಳಿಗೆ ಬೆಂಕಿ ಹಚ್ಚಿ ಬೆಲೆಬಾಳುವ ವಸ್ತುಗಳನ್ನು ದೋಚಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read