ಬೆದರಿಕೆಗೆ ಹೆದರಲ್ಲ; ಊರಿನ ಮನೆ ಮನೆಗಳ ಮೇಲೆ ಹನುಮ ಧ್ವಜ ಹಾರಿಸುತ್ತೇವೆ; ತಾಕತ್ತಿದ್ದರೆ ತಡೆಯಲಿ; ಸರ್ಕಾರಕ್ಕೆ ಬಿಜೆಪಿ ನಾಯಕನ ಸವಾಲು

ಮಂಡ್ಯ: ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮದಲ್ಲಿ ಹನುಮ ಧ್ವಜ ವಿವಾದ ರಾಜಕೀಯ ತಿರುವು ಪಡೆದುಕೊಂಡಿದ್ದು, ಬಿಜೆಪಿ ಜಿಲ್ಲಾಧ್ಯಕ್ಷ ಇಂದ್ರೇಶ್, ಹನುಮ ಧ್ವಜ ವಿಚಾರವಾಗಿ ರಾಜಕೀಯ ಮಾಡುತ್ತಿರುವುದು ಕಾಂಗ್ರೆಸ್ ಹೊರತು ಬಿಜೆಪಿ ಅಲ್ಲ ಎಂದಿದ್ದಾರೆ.

ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಇಂದ್ರೇಶ್, ಹೊರಗಿನಿಂದ ಜನರನ್ನು ಕರೆತಂದು ಗಲಾಟೆ ಮಾಡಿಸಲಾಗಿದೆ ಎಂಬ ಕಾಂಗ್ರೆಸ್ ಆರೋಪದಲ್ಲಿ ಹುರುಳಿಲ್ಲ. ಪೊಲೀಸರಿಂದ ಲಾಠಿ ಏಟು ತಿಂದವರೆಲ್ಲರೂ ಸ್ಥಳೀಯರು. ಯಾರೂ ಹೊರಗಿನಿಂದ ಬಂದವರಲ್ಲ. ಅಪ್ರಾಪ್ತ ಬಾಲಕನೊಬ್ಬನನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಆತನ ಪೋಷಕರು ಭಯಭೀತರಾಗಿದ್ದಾರೆ ಎಂದು ಕಿಡಿಕಾರಿದರು.

ಗ್ರಾಮಸ್ಥರ ಮನೆಗಳಿಗೆ ತೆರಳಿ ಪೊಲೀಸರು ಅವರನ್ನು ಹೆದರಿಸುವ ಕೆಲಸ ಮಾಡುತ್ತಿದ್ದಾರೆ. ಪೊಲೀಸರ ಬೆದರಿಕೆಗೆ ಹೆದರುವ ಮಾತಿಲ್ಲ. ಈಡೀ ಊರಿನ ಜನರು ತಮ್ಮ ತಮ್ಮ ಮನೆಗಳ ಮೇಲೆ ಹನುಮ ಧ್ವಜ ಏರಿಸಲಿ ನಿರ್ಧರಿಸಿದ್ದಾರೆ. ಮನೆ ಮನೆಗಳ ಮೇಲೆ ಹನುಮ ಧ್ವಜ ಹಾರಿಸುತ್ತೇವೆ. ತಾಕತ್ತಿದ್ದರೆ ತಡೆಯಲಿ ನೋಡೋಣ ಎಂದು ಸರ್ಕಾರಕ್ಕೆ ಸವಾಲು ಹಕಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read