ಮಂಡ್ಯ: ಕಂಠಪೂರ್ತಿ ಕುಡಿದು ಬಂದ ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕನೊಬ್ಬ ಬಸ್ ನಿಲ್ದಾಣದಲ್ಲಿ ಹುಚ್ಚಾಟ ನಡೆಸಿರುವ ಘಟನೆ ಮಂಡ್ಯ ನಗರದಲ್ಲಿ ನಡೆದಿದೆ.
ಮಂಡ್ಯ ನಗರದ ಬಸ್ ನಿಲ್ದಾಣದಲ್ಲಿ ಬಸ್ ಚಾಲಕನೊಬ್ಬ ಕುಡಿದು ಬಂದು ಶರ್ಟ್, ಪ್ಯಾಂಟ್ ಬಿಚ್ಚಿ ಹುಚ್ಚಾಟ ಮೆರೆದಿದ್ದಾನೆ. ಶಿಳ್ಳೆ ಹೊಡೆದು ಅಸಭ್ಯವಾಗಿ ವರ್ತಿಸಿದ್ದಾನೆ. ಚಾಲಕನ ರಾಧ್ಧಾಂತ ಕಂಡು ಪ್ರಯಾಣಿಕರು ದಂಗಾಗಿದ್ದಾರೆ. ಮಹಿಳಾ ಪ್ರಯಾಣಿಕರಿಗೂ ಮುಜುಗರವುಂಟಾಗುವಂತೆ ನಡೆದುಕೊಂಡಿದ್ದಾನೆ.
ನಶೆಯಲ್ಲಿರುವ ಚಾಲಕನ ವರ್ತನೆ ಕಂಡು ಪ್ರಯಾಣಿಕರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ.