ರೂಪೇಶ್ ಜಿಆರ್ ಅಭಿನಯದ ‘ಮನದರಸಿ’ ಚಿತ್ರ ಮುಂದಿನ ತಿಂಗಳು ಮಾರ್ಚ್ 8ರಂದು ರಾಜ್ಯದ್ಯಂತ ತೆರೆ ಮೇಲೆ ಬರಲಿದೆ. ಈ ಕುರಿತು ಚಿತ್ರ ತಂಡ ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದೆ.ರೋಮ್ಯಾಂಟಿಕ್ ಲವ್ ಸ್ಟೋರಿ ಕಥಾಹಂದರ ಈ ಸಿನಿಮಾ ತನ್ನ ಹಾಡುಗಳ ಮೂಲಕವೇ ಗಾನಪ್ರಿಯರ ಗಮನ ಸೆಳೆದಿದೆ.
ಟಿಎಸ್ ಕೃಷ್ಣಮೂರ್ತಿ ನಿರ್ದೇಶನದ ಈ ಚಿತ್ರವನ್ನು ಪಿಕೆಆರ್ ಪ್ರೊಡಕ್ಷನ್ಸ್ ಸಂಸ್ಥೆ ನಿರ್ಮಾಣ ಮಾಡಿದ್ದು, ಶಿವರಾಜ್ ಸಹ ನಿರ್ಮಾಪಕರಾಗಿ ಕೆಲಸ ಮಾಡಿದ್ದಾರೆ. ರೂಪೇಶ್ ಜಿ ರಾಜ್ ಹಾಗೂ ಸುಹಾನ ಎಸ್ ಗೌಡ ಸೇರಿದಂತೆ ಪ್ರೀತಿ ಪೂಜಾ, ಅಂಜನಪ್ಪ, ಮಜಾ ಭಾರತ ಬಸವರಾಜ್, ಕೆಜಿಎಫ್ ಕೃಷ್ಣಪ್ಪ ತೆರೆ ಹಂಚಿಕೊಂಡಿದ್ದಾರೆ. ವಿನು ಮನಸು ಸಂಗೀತ ಸಂಯೋಜನೆ ನೀಡಿದ್ದು, ನಾಗರಾಜ್ ಬಿ ಅರಸೂರ ಸಂಕಲನ, ವೇಣು ಮೂರ್ತಿ ಛಾಯಾಗ್ರಹಣವಿದೆ.
https://twitter.com/A2MusicSouth/status/1762056705427615780