ಗುದನಾಳದಲ್ಲಿ ಸಿಕ್ಕಿಬಿದ್ದ ಸೌತೆಕಾಯಿ…..! ಮುಂದೇನಾಯ್ತು ನೀವೇ ನೋಡಿ

ಆಹಾರ ತಿನ್ನುವಾಗ ಗಂಟಲಿನಲ್ಲಿ ಸಿಲುಕಿಕೊಳ್ಳುವುದು ಬದಲು ಗುದನಾಳದಲ್ಲಿ ಸಿಲುಕಿರುವುದನ್ನು ಎಲ್ಲಿಯಾದರೂ ಕೇಳಿದ್ದೀರಾ ? ಆದರೆ ಕೊಲಂಬಿಯಾದ ಬಾರಾನೋವಾದಿಂದ ಬಂದ 40 ವರ್ಷದ ವ್ಯಕ್ತಿಯೊಬ್ಬನಿಗೆ ಹೀಗೆಯೇ ಆಗಿದೆ.

ವಿಪರೀತ ಹಿಂಬದಿ ನೋವು ಅನುಭವಿಸುತ್ತಿದ್ದು, ನಡೆದಾಡಲು ಕಷ್ಟಪಡುತ್ತಿದ್ದ ಈ ವ್ಯಕ್ತಿಯನ್ನು ಪರಿಶೀಲಿಸಿದಾಗ ಗುದನಾಳದಲ್ಲಿ ಸೌತೆಕಾಯಿ ಇರುವುದು ತಿಳಿದುಬಂದಿದೆ.

ಈ ಬಗ್ಗೆ ಕೇಳಿದಾಗ ವ್ಯಕ್ತಿ ತಾನು ಹೆಚ್ಚಿನ ಪ್ರಮಾಣದಲ್ಲಿ ಸೌತೆಕಾಯಿ ಸೇವಿಸುತ್ತೇನೆ. ಹೀಗಾಗಿ ಹೊಟ್ಟೆಯಲ್ಲಿ ಸೌತೆಕಾಯಿ ಬೆಳೆದು ಹೀಗಾಗಿರಬಹುದು ಎಂದಿದ್ದಾನೆ. ಆತನ ಮಾತಿಗೆ ವೈದ್ಯರು ದಂಗಾಗಿದ್ದಾರೆ.

ತೀವ್ರ ನೋವಿನಿಂದ ಬಂದಾಗ ಎಕ್ಸ್​ರೇ ಮಾಡಿದ್ದಾರೆ. ಈ ಸಂದರ್ಭದಲ್ಲಿ ಸೌತೆಕಾಯಿ ಸಿಲುಕಿ ಹಾಕಿಕೊಂಡಿರುವುದು ಗೋಚರಿಸಿದೆ. ಸೌತೆಕಾಯಿ ತನ್ನ ದೇಹದೊಳಗೆ ಹೇಗೆ ಸಿಲುಕಿಕೊಂಡಿದೆ ಎಂದು ತನಗೆ ತಿಳಿದಿಲ್ಲ ಎಂದು ವ್ಯಕ್ತಿ ಹೇಳಿದ್ದಾನೆ.

ಬಹಳಷ್ಟು ಸೌತೆಕಾಯಿಗಳನ್ನು ತಿನ್ನುವ ಕಾರಣ ಸೌತೆಕಾಯಿ ಬೀಜದಿಂದಾಗಿ ಜೀರ್ಣಾಂಗ ವ್ಯವಸ್ಥೆಯೊಳಗೆ ಸೌತೆಕಾಯಿ ಬೆಳೆದಿರಬಹುದು ಎಂದು ಆತ ತಿಳಿಸಿದ್ದಾನೆ. ಇದು ಕಾರಣವಲ್ಲದಿದ್ದರೂ ವೈದ್ಯರು ಮಾತ್ರ ಈಗ ನಿಜ ಕಾರಣ ತಿಳಿಯಲು ಉತ್ಸುಕರಾಗಿದ್ದಾರೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read