ಬಾಂದ್ರಾ ಕೆಫೆಯಲ್ಲಿ ಬೆಂಗಳೂರು ಮೂಲದ ಯುವತಿಗೆ ಲೈಂಗಿಕ ಕಿರುಕುಳ; ವ್ಯಕ್ತಿ ವಿರುದ್ದ ಕೇಸ್

ಮುಂಬೈಗೆ ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಭೇಟಿ ನೀಡಿದ್ದ ಬೆಂಗಳೂರು ಯುವತಿಗೆ ಬಾಂದ್ರಾ ಕೆಫೆ ಮತ್ತು ಬಾರ್‌ನಲ್ಲಿ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಮುಂಬೈ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.

ಮಾರ್ಚ್ 25 ರಂದು ಬಾಂದ್ರಾ ಕೆಫೆ ಮತ್ತು ಬಾರ್‌ನಲ್ಲಿ ಬೆಂಗಳೂರಿನ ಮಹಿಳೆಗೆ ಕಿರುಕುಳ ನೀಡಿದ ವ್ಯಕ್ತಿಯನ್ನು ಪೊಲೀಸರು ಗುರುತಿಸಿದ್ದಾರೆ.

ಡಾರ್ಜಿಲಿಂಗ್‌ನಲ್ಲಿ ಕೆಲಸ ಮಾಡುವ ಮಹಿಳೆ, ಸ್ನೇಹಿತನ ನಿಶ್ಚಿತಾರ್ಥದ ಪಾರ್ಟಿಗಾಗಿ ಬಾಂದ್ರಾದಲ್ಲಿನ ರೆಸ್ಟೊ-ಬಾರ್‌ಗೆ ತನ್ನ ಕುಟುಂಬದೊಂದಿಗೆ ಬಂದಿದ್ದರು.

ಈ ವೇಳೆ ಮದ್ಯಪಾನ ಮಾಡಿದ್ದ ವ್ಯಕ್ತಿಯೊಬ್ಬ ಆಕೆಯನ್ನ ಹಿಡಿದು ಎಳೆದಿದ್ದಾನೆ. ಇದನ್ನ ವಿರೋಧಿಸಿದಾಗ ಗಲಾಟೆ ನಡೆದಿದ್ದು ಮಹಿಳೆ ವ್ಯಕ್ತಿಗೆ ಹೊಡೆದಿದ್ದಾರೆ.

ಈ ಬಗ್ಗೆ ರೆಸ್ಟೋ-ಬಾರ್ ಮ್ಯಾನೇಜ್‌ಮೆಂಟ್ ಗೆ ತಿಳಿಸಿದ್ರೂ ಅವರು ಕ್ರಮ ಕೈಗೊಳ್ಳದೇ, ಮಹಿಳೆಯನ್ನೇ ಅಲ್ಲಿಂದ ಹೋಗುವಂತೆ ಸೂಚಿಸಿದ್ದರಂತೆ.

ಘಟನೆ ನಡೆದ ಮರುದಿನ ಮುಂಜಾನೆಯೇ ಮಹಿಳೆ ವಿಮಾನದಲ್ಲಿ ಪ್ರಯಾಣ ಮಾಡಬೇಕಿದ್ದ ಕಾರಣ ಆಕೆ ಪೊಲೀಸರಿಗೆ ನೇರವಾಗಿ ದೂರು ನೀಡಲು ಸಾಧ್ಯವಾಗದೇ ಸಾಮಾಜಿಕ ಮಾಧ್ಯಮದಲ್ಲಿ ಮುಂಬೈ ಪೊಲೀಸರಿಗೆ ಸಿಸಿ ಕ್ಯಾಮೆರಾ ಸಾಕ್ಷಿಯೊಂದಿಗೆ ಟ್ಯಾಗ್ ಮಾಡಿದ್ದರು. ನಂತರ ಪೊಲೀಸರು ಮುಂಬೈನಲ್ಲಿದ್ದ ಮಹಿಳೆಯ ಕುಟುಂಬವನ್ನು ಸಂಪರ್ಕಿಸಿ ದೂರು ಪಡೆದು ತನಿಖೆ ಆರಂಭಿಸಿದ್ದಾರೆ.

“ಎಫ್‌ಐಆರ್ ದಾಖಲಿಸಿದ ನಂತರ, ಕೆಲವೇ ಗಂಟೆಗಳಲ್ಲಿ ನಾವು ಶಂಕಿತನನ್ನು ಗುರುತಿಸಿದ್ದೇವೆ ಮತ್ತು ಬಂಧನಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ನಡೆಯುತ್ತಿದೆ” ಎಂದು ಪೊಲೀಸ್ ಉಪ ಆಯುಕ್ತ (ವಲಯ 9) ಅನಿಲ್ ಪರಸ್ಕರ್ ಹೇಳಿದ್ದಾರೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read