ಟ್ರಿಗನೋಮೆಟ್ರಿ ಬಳಸಿ ಯುವತಿ ಎತ್ತರ ಪತ್ತೆ: ನೆಟ್ಟಿಗರಿಂದ ಶ್ಲಾಘನೆ

ತ್ರಿಕೋನಮಿತಿಯನ್ನು (ಟ್ರಿಗನೋಮೆಟ್ರಿ) ಅರ್ಥಮಾಡಿಕೊಳ್ಳಲು ಕಷ್ಟ ಮತ್ತು ಸಂಕೀರ್ಣವಾಗಿದ್ದರೂ, ಇದು ಹಲವಾರು ನಿಜ ಜೀವನದ ಸಂದರ್ಭಗಳಲ್ಲಿ ಖಂಡಿತವಾಗಿಯೂ ತುಂಬಾ ಉಪಯುಕ್ತವಾಗಿದೆ. ಗಣಿತಶಾಸ್ತ್ರದ ಈ ಶಾಖೆಯು ತುಂಬಾ ಕುತೂಹಲವಾಗಿದೆ.

ವಾಯುಯಾನ, ವಿಜ್ಞಾನ, ವಾಸ್ತುಶಿಲ್ಪ ಮತ್ತು ಹೆಚ್ಚಿನವುಗಳನ್ನು ಒಳಗೊಂಡಂತೆ ಅನೇಕ ಕ್ಷೇತ್ರಗಳಲ್ಲಿ ಇದನ್ನು ವ್ಯಾಪಕವಾಗಿ ಬಳಸಲಾಗುತ್ತದೆ. ಇದೀಗ, ಟ್ವಿಟರ್ ಬಳಕೆದಾರರು ಯುವತಿಯ ಎತ್ತರವನ್ನು ಲೆಕ್ಕಾಚಾರ ಮಾಡಲು ತ್ರಿಕೋನಮಿತಿಯ ಸಹಾಯವನ್ನು ತೆಗೆದುಕೊಂಡಿದ್ದಾರೆ.

ಯುವತಿಯೊಬ್ಬರು ಟ್ವಿಟರ್‌ನಲ್ಲಿ ತನ್ನ ಫೋಟೋವನ್ನು ಅಪ್‌ಲೋಡ್ ಮಾಡಿದಾಗ, ಅವರ ಎತ್ತರವನ್ನು ಊಹಿಸಲು ಬಳಕೆದಾರ ಟ್ರಿಗನೋಮೆಟ್ರಿ ಬಳಸಿದ್ದಾರೆ. ಕೆಲವೇ ಗಂಟೆಗಳಲ್ಲಿ ಸಮಸ್ಯೆ ಬಗೆಹರಿಸಿ ಭೇಷ್​ ಎನಿಸಿಕೊಂಡಿದ್ದಾರೆ. ಇದರ ಪ್ರಕಾರ ಯುವತಿಯ ಎತ್ತರವು “5 ಅಡಿ 4.5” ಎಂದು ತೋರುತ್ತಿದೆ.

ಎಲ್ಲಾ ರೀತಿಯ ಭಾಗಾಕಾರ, ಗುಣಾಕಾರವನ್ನು ಲೆಕ್ಕಾಚಾರ ಮಾಡಿ ಯುವತಿಯ ನಿಖರ ಎತ್ತರವನ್ನು ಕಂಡುಹಿಡಿದುದಕ್ಕೆ ನೆಟ್ಟಿಗರು ಭೇಷ್​ ಭೇಷ್​ ಎನ್ನುತ್ತಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read