ಬೆಂಗಳೂರು: ವ್ಯಕ್ತಿಯೋರ್ವ ಅನಾರೋಗ್ಯಕ್ಕೆ ನೊಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನ ಗೊಲ್ಲರಹಟ್ಟಿಯಲ್ಲಿ ನಡೆದಿದೆ.
ಪುರುಷೋತ್ತಮ (27) ಮೃತ ವ್ಯಕ್ತಿ. ರಾಮನಗರ ಜಿಲ್ಲೆಯ ಬಾಳೆನಹಳ್ಳಿ ಮೂಲದ ಪುರುಷೋತ್ತಮ್, ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಪತ್ನಿ ಹಾಗೂ ಮಗುವಿನೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.
ಪುರುಷೋತ್ತಮ್ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು. ಇದರಿಂದ ಬೇಸತ್ತು ಬಾಡಿಗೆ ಮನೆಯಲ್ಲಿಯೇ ನೇಣಿಗೆ ಶರಣಾಗಿದ್ದಾರೆ. ಮನೆ ಬಾಗಿಲು ಲಾಕ್ ಮಾಡಿದ್ದ ಪುರುಷೋತ್ತಮ್ ಬಾಗಿಲು ತೆರೆಯದಿದ್ದಾಗ ಅನುಮನಬಂದು ಪರಿಶೀಲಿಸಿದಾಗ ಅವರು ಸಾವಿಗೆ ಶರಣಾಗಿರುವುದು ಬೆಳಕಿಗೆ ಬಂದಿದೆ.
ಬ್ಯಾಡರಹಳ್ಳಿ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದು, ತನಿಖೆ ನಡೆಸಿದ್ದಾರೆ.