ಲಖನೌ: ವ್ಯಕ್ತಿಯೋರ್ವ ನಾಲ್ವರು ಮಕ್ಕಳೊಂದಿಗೆ ನದಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಸಲ್ಮಾನ್ ನಾಲ್ವರು ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿ. ಸಾವಿಗೂ ಮುನ್ನ ವಿಡಿಯೋ ರೆಕಾರ್ಡ್ ಮಾಡಿರುವ ಸಲ್ಮಾನ್, ಪತ್ನಿಯೊಂದಿಗೆ ಜಗಳವಾಗಿದ್ದು, ಆಕೆ ಮನೆಬಿಟ್ಟು ಬೋರೊಬ್ಬನ ಜೊತೆ ಹೋಗಿದ್ದಾಳೆ.
ಪತ್ನಿ ಖುಷ್ನುಮಾ ತನ್ನ ಪ್ರಿಯಕರನ ಜೊತೆ ಓಡಿಹೋಗಿದ್ದು ಮನನೊಂದು ತಾನು ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ತನ್ನ ಸಹೋದರಿಗೆ ವಿಡಿಯೋ ರೆಕಾರ್ಡ್ ಕಳುಹಿಸಿದ್ದಾನೆ. ಬಳಿಕ ನದಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾನೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪೊಲೀಸರು ಸಲ್ಮಾನ್ ಹಾಗೂ ಮಕ್ಕಳನ್ನು ರಕ್ಷಿಸಲು ಯತ್ನಿಸಿದರಾದರೂ ಬದುಕುಳಿಯಲಿಲ್ಲ. ಮೃತರನ್ನು ತಂದೆ ಸಲ್ಮಾನ್, ಮಕ್ಕಳಾದ ಮೆಹೆಕ್ (12) ಶಿಫಾ (5), ಅಮನ್ (3) ಹಾಗೂ 8 ತಿಂಗಳ ಕಂದಮ್ಮ ಇನೈಶಾ ಎಂದು ಗುರುತಿಸಲಾಗಿದೆ.