ಋತುಸ್ರಾವದ ಸಮಯದಲ್ಲಿ ಗೃಹಿಣಿಯನ್ನು ರಾಣಿಯಂತೆ ನೋಡಿಕೊಳ್ಳುತ್ತೆ ಈ ಕುಟುಂಬ

ಒಂದೆಡೆ, ಭಾರತದಲ್ಲಿ ಮುಟ್ಟಿನ ಸುತ್ತಲಿನ ನಿಷೇಧವನ್ನು ಎದುರಿಸಲು ಬಹುಪಾಲು ಜನರು ಹೆಣಗಾಡುತ್ತಿರುವಾಗ, ಈ ಕುಟುಂಬದ ಪುರುಷರು ಮನೆಯ ಮಹಿಳೆಯರ ಋತುಸ್ರಾವದ ಸಮಯದಲ್ಲಿ ತಮ್ಮಿಂದಾದ ಎಲ್ಲ ಕೆಲಸವನ್ನೂ ಮಾಡುತ್ತಿದ್ದಾರೆ. ಇವರ ವಿಡಿಯೋ ವೈರಲ್​ ಆಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಹೀರೋಗಳು ಎಂದು ಕರೆಯಲಾಗುತ್ತಿದೆ.

ಈ ಕುಟುಂಬವು ಬಹಳ ಹಿಂದಿನಿಂದಲೂ ಸ್ಟೀರಿಯೊಟೈಪ್ ಅನ್ನು ಮುರಿದು ಕೆಲಸ ನಿರ್ವಹಿಸುತ್ತಿದೆ. ತಮ್ಮ ಮನೆಯ ಮಹಿಳೆಯನ್ನು ಸಾಧ್ಯವಾದಷ್ಟು ಉತ್ತಮ ರೀತಿಯಲ್ಲಿ ನೋಡಿಕೊಳ್ಳುತ್ತಿದ್ದಾರೆ. ಋತುಚಕ್ರದ ಸಮಯದಲ್ಲಿ ಮಹಿಳೆಯರ ಬಗ್ಗೆ ಹೆಚ್ಚಿನ ತಿಳುವಳಿಕೆ ಮತ್ತು ಸಹಾನುಭೂತಿಯನ್ನು ಉತ್ತೇಜಿಸುವ ಪ್ರಯತ್ನದಲ್ಲಿ ಈ ವಿಡಿಯೋ ಶೇರ್​ ಆಗಿದೆ.

ಇನ್​ಸ್ಟಾಗ್ರಾಮ್​ ಬಳಕೆದಾರ ಅನೀಶ್ ಭಗತ್ ಅವರು ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ, ಅಲ್ಲಿ ಅವರು ತಮ್ಮ ತಂದೆ ಮತ್ತು ಸಹೋದರನೊಂದಿಗೆ ತಮ್ಮ ತಾಯಿಯ ಋತುಚಕ್ರದ ಸಮಯದಲ್ಲಿ ಆಕೆಯನ್ನು “ರಾಣಿಯಂತೆ” ನೋಡಿಕೊಳ್ಳುವುದಾಗಿ ತಿಳಿಸಿದ್ದಾರೆ.

“ನನ್ನ ತಂದೆ ನನಗೆ ಮತ್ತು ನನ್ನ ಸಹೋದರನಿಗೆ ಪಿರಿಯಡ್ಸ್ ಪರಿಕಲ್ಪನೆಯನ್ನು ಹದಿಮೂರನೇ ವಯಸ್ಸಿನಲ್ಲಿ ಪರಿಚಯಿಸಿದ್ದರು. ನಾನು ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂದು ಅವರು ಆಗಲೇ ಹೇಳಿದ್ದರು. ಹೀಗೆ ಪ್ರತಿಯೊಂದು ಮನೆಯಲ್ಲಿಯೂ ಹೇಳಿದರೆ ಎಲ್ಲ ಮನೆಯ ಹೆಣ್ಣುಮಕ್ಕಳು ಆಪ್ತ ಮನೋಭಾವ ಹೊಂದುತ್ತಾರೆ ಎಂದು ಅವರು ಹೇಳಿದ್ದು, ನೆಟ್ಟಿಗರಿಂದ ಶ್ಲಾಘನೆಗಳ ಮಹಾಪೂರವೇ ಹರಿದುಬರುತ್ತಿದೆ.

https://youtu.be/pkpMDsAxY70

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read