ಬಿಸಲಿನ ಝಳ ಹಾಗೂ ನೀರಿಲ್ಲದೇ ನಿತ್ರಾಣಗೊಂಡಿದ್ದ ಗುಬ್ಬಚ್ಚಿಯೊಂದನ್ನು ರಕ್ಷಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಭಾರತೀಯ ಅರಣ್ಯ ಸೇವೆ (ಐಎಫ್‌ಎಸ್) ಆಧಿಕಾರಿ ಪ್ರವೀಣ್ ಕಸ್ವಾನ್ ಈ ವಿಡಿಯೋವನ್ನು ಟ್ವಿಟರ್‌ನಲ್ಲಿ ಶೇರ್ ಮಾಡಿದ್ದಾರೆ. ನಿತ್ರಾಣಗೊಂಡ ಗುಬ್ಬಚ್ಚಿಯ ನೆತ್ತಿ ಮೇಲೆ ಸಹೃದಯಿಯೊಬ್ಬರು ನೀರು ಚುಮುಕಿಸುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.
ನೋಡ ನೋಡುತ್ತಲೇ ಮರುಜೀವ ಪಡೆಯುವ ಗುಬ್ಬಚ್ಚಿ, ಸ್ವಲ್ಪ ನೀರನ್ನು ಗುಟುಕರಿಸಿ ಮರುಚೈತನ್ಯ ಪಡೆಯುತ್ತವೆ.
“ಬದುಕು ಹಾಗೂ ಸಾವಿನ ನಡುವೆ ಕೆಲವೇ ಹನಿ ನೀರುಗಳಿವೆ. ನಿಮ್ಮ ಮನೆಯ ಸುತ್ತಲೂ ಕಂಟೇನರ್‌ನಲ್ಲಿ ನೀರು ಇಡುವ ಮೂಲಕ ಬಿಸಿಲಿನ ಝಳದಿಂದ ಪ್ರಾಣಿ ಪಕ್ಷಿಗಳಿಗೆ ರಕ್ಷಿಸಿಕೊಳ್ಳಲು ನೆರವಾಗಿ,” ಎಂದು ಕ್ಯಾಪ್ಷನ್ ಕೊಟ್ಟು ವಿಡಿಯೋ ಶೇರ್ ಮಾಡಿದ್ದಾರೆ ಕಸ್ವಾನ್.
https://twitter.com/susantananda3/status/1664651654719995904?ref_src=twsrc%5Etfw%7Ctwcamp%5Etweetembed%7Ctwterm%5E1664651654719995904%7Ctwgr%5E4449e414ff3c080d7731e401239aef6642220f29%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fman-revives-parched-sparrow-with-a-bit-of-water-ifs-officers-post-has-a-deep-message-2388376-2023-06-03
https://twitter.com/marie_land55/status/1664709439675420698?ref_src=twsrc%5Etfw%7Ctwcamp%5Etweetembed%7Ctwterm%5E166
https://twitter.com/ronit9q/status/1664671367114149888?ref_src=twsrc%5Etfw%7Ctwcamp%5Etweetembed%7Ctwterm%5E1664671367114149888%7Ctwgr%5E4449e414ff3c080d7731e401239aef6642220f29%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fman-revives-parched-sparrow-with-a-bit-of-water-ifs-officers-post-has-a-deep-message-2388376-2023-06-03