Viral Video | ವಿದ್ಯುತ್‌ ತಂತಿಗೆ ಸಿಲುಕಿ ಒದ್ದಾಡುತ್ತಿದ್ದ ಪಾರಿವಾಳ; ಪ್ರಾಣವನ್ನೇ ಪಣಕ್ಕಿಟ್ಟು ರಕ್ಷಿಸಿದ ಕರುಣಾಳು

ಅಮಾನವೀಯ ಕೃತ್ಯಗಳು ನಡೆಯುತ್ತಿರುವ ನಡುವೆಯೇ ದಯಾಮಯಿಗಳೂ ಅಲ್ಲಲ್ಲಿ ಕಾಣಸಿಗುತ್ತಾರೆ. ಅಂಥ ಒಂದು ದಯಾಮಯಿಯ ವಿಡಿಯೋ ವೈರಲ್​ ಆಗಿದೆ. ವಿದ್ಯುತ್ ಕಂಬದಲ್ಲಿ ಸಿಲುಕಿದ್ದ ಪಾರಿವಾಳವನ್ನು ವ್ಯಕ್ತಿಯೊಬ್ಬ ಪ್ರಾಣ ಪಣಕ್ಕಿಟ್ಟು ರಕ್ಷಿಸಿದ ವಿಡಿಯೋ ಆನ್‌ಲೈನ್‌ನಲ್ಲಿ ವೈರಲ್ ಆಗಿದೆ.

ಈಗ ವೈರಲ್ ಆಗಿರುವ ವಿಡಿಯೋವನ್ನು ದಿ ಪಿತಾರಿ ಎಂಬ ಇನ್‌ಸ್ಟಾಗ್ರಾಮ್ ಪುಟ ಹಂಚಿಕೊಂಡಿದೆ. ವಿಡಿಯೋದಲ್ಲಿ, ಮೇಲೆ ಸಿಲುಕಿರುವ ಪಾರಿವಾಳವನ್ನು ರಕ್ಷಿಸಲು ವ್ಯಕ್ತಿಯೊಬ್ಬರು ವಿದ್ಯುತ್ ಕಂಬವನ್ನು ಏರುತ್ತಿರುವುದನ್ನು ಕಾಣಬಹುದು.

ಪಾರಿವಾಳದ ರೆಕ್ಕೆಗೆ ಗಾಳಿಪಟದ ಹಗ್ಗವೂ ಸಿಕ್ಕಿಕೊಂಡು ಅದು ಒದ್ದಾಡುತ್ತಿತ್ತು. ಕರುಣಾಳು ಹಗ್ಗವನ್ನು ತುಂಡು ಮಾಡಿ ಹಕ್ಕಿಗೆ ನೀರು ಕೂಡ ಕೊಟ್ಟರು. ಮನುಷ್ಯತ್ವದ ಮೇಲಿನ ನಂಬಿಕೆ ಮತ್ತೆ ಜೀವಂತವಾಯಿತು ಎಂದು ನೆಟ್ಟಿಗರು ಶ್ಲಾಘಿಸಿದ್ದಾರೆ.

https://www.youtube.com/watch?v=IYq5qi21ASQ

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read