Watch Video | ಸಾಕು ನಾಯಿಯೊಂದಿಗಿನ 10 ವರ್ಷದ ಹಳೆ ವಿಡಿಯೋ ಮರುಸೃಷ್ಟಿ

Man recreates 10-year-old video with pet dog that made them go viral. Watch - India Today

ಸಾಕುನಾಯಿಗಳು ಮನೆಯ ಸದಸ್ಯರಿದ್ದಂತೆ. ಹಲವರಿಗೆ ತಮ್ಮ ನೆಚ್ಚಿನ ನಾಯಿಗಳೊಂದಿಗೆ 10 ವರ್ಷ ವಯಸ್ಸಿನ ಕ್ಷಣವನ್ನು ಮರುಸೃಷ್ಟಿಸಲು ಆಗುವುದಿಲ್ಲ. ಯಾಕೆಂದರೆ, ಶ್ವಾನಗಳ ಜೀವಿತಾವಧಿಯು ತುಂಬಾ ಚಿಕ್ಕದಾಗಿದೆ. ಆದರೆ ನಿಮಗೆ ಎಂದಾದರೂ ಅವಕಾಶ ಸಿಕ್ಕರೆ, ಅದನ್ನು ಎಂದಿಗೂ ಕಳೆದುಕೊಳ್ಳಬೇಡಿ. ಯಾಕೆ ಎಂಬುದನ್ನು ಮುಂದೆ ಓದಿ..

ಪ್ಯಾಟ್ರಿಕ್ ಬಾರ್ನ್ಸ್ ಎಂಬಾತ ತನ್ನ ಸಾಕುಪ್ರಾಣಿ ಕ್ವಿನ್ಸಿ ಜೊತೆ 10 ವರ್ಷಗಳ ಹಿಂದೆ ರಸ್ತೆ ಪ್ರವಾಸ ಕೈಗೊಂಡಿದ್ದರು. ಇಬ್ಬರೂ ಕಾರಿನಲ್ಲಿ ಹೋಗುವಾಗ ಪ್ಯಾಟ್ರಿಕ್ ವಿಡಿಯೋ ರೆಕಾರ್ಡ್ ಮಾಡಿದ್ದಾರೆ. ಇಬ್ಬರಲ್ಲೂ ಉತ್ಸಾಹವು ಅಪಾರವಾಗಿತ್ತು. ಪ್ಯಾಟ್ರಿಕ್ ಜೋರಾಗಿ ಕೂಗಿದ್ರೆ, ಕ್ವಿನ್ಸಿ ಕೂಡ ಹಾಗೆಯೇ ಕೂಗಿದ್ದಾಳೆ. ಇದು ಎಷ್ಟು ಮುದ್ದಾಗಿತ್ತೆಂದರೆ, ಕ್ಷಣಾರ್ಧದಲ್ಲಿ ವಿಡಿಯೋ ವೈರಲ್ ಆಗಿತ್ತು.

10 ವರ್ಷಗಳ ನಂತರ, ಪ್ಯಾಟ್ರಿಕ್ ಅವರು ಈ ಕ್ಷಣವನ್ನು ಮರು ಸೃಷ್ಟಿಸಬೇಕು ಎಂದು ನಿರ್ಧರಿಸಿದರು. ಆದರೆ, ಕ್ವಿನ್ಸಿ ಹಾಗೆಯೇ ಮಾಡುತ್ತಾಳೆಯೇ? ಯಾಕೆಂದರೆ ಅವಳ ವಯಸ್ಸು 14. ಅವಳ ವಯಸ್ಸನ್ನು ಗಮನಿಸಿದರೆ ಅದು ಕಷ್ಟಕರವಾಗಿತ್ತು. ಆದರೆ ಅವಳು ತನ್ನ ಮುದ್ದಿನ ಮಾಲೀಕ ಪ್ಯಾಟ್ರಿಕ್ ಜೊತೆ ರಸ್ತೆ ಪ್ರವಾಸ ಕೈಗೊಂಡಳು. ಪ್ಯಾಟ್ರಿಕ್ ಜೋರಾಗಿ ಕೂಗುತ್ತಿದ್ದಂತೆ ಆಕೆ ಕೂಡ ಹಾಗೆಯೇ ಮಾಡುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದಳು.

10 ವರ್ಷಗಳ ಹಿಂದೆ ಈ ದಿನ, ನಾನು ಇದನ್ನು ಕ್ವಿನ್ಸಿಯೊಂದಿಗೆ ಪೋಸ್ಟ್ ಮಾಡಿದ್ದೇನೆ. 10 ವರ್ಷಗಳ ನಂತರ, ಮತ್ತೆ ಇದೇ ವಿಡಿಯೋವನ್ನು ಮರುಸೃಷ್ಟಿಸಿ ಪೋಸ್ಟ್ ಮಾಡುತ್ತಿದ್ದೇನೆ. ಸಮಯ ಹೇಗೆ ಕಳೆದು ಹೋಗುತ್ತದೆ ಎಂದು ತಿಳಿಯುವುದಿಲ್ಲ ಎಂದು ಪೋಸ್ಟ್ ಮಾಡಿದ್ದಾರೆ. ಸದ್ಯ, ಈ ವಿಡಿಯೋ ವೈರಲ್ ಆಗಿದ್ದು, ಇದು ನಿಜವಾಗಿಯೂ 10 ವರ್ಷಗಳು ಎಂದು ನಾನು ನಂಬಲು ಸಾಧ್ಯವಿಲ್ಲ ಎಂದು ಬಳಕೆದಾರರು ಬರೆದಿದ್ದಾರೆ.

https://www.youtube.com/watch?v=9qgeNOmzolI

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read