ಪ್ರಿಯಕರನೊಂದಿಗಿನ ಖಾಸಗಿ ದೃಶ್ಯ ಬಹಿರಂಗಪಡಿಸುವುದಾಗಿ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ

ನವದೆಹಲಿ: ಪ್ರಿಯಕರನೊಂದಿಗಿನ ಖಾಸಗಿ ದೃಶ್ಯ ಬಹಿರಂಗಪಡಿಸುವುದಾಗಿ ದೆಹಲಿಯ ರೋಹಿಣಿಯಲ್ಲಿರುವ ಅಪಾರ್ಟ್‌ಮೆಂಟ್‌ ನಲ್ಲಿ ವರ್ಷದ ಕಾಲೇಜು ವಿದ್ಯಾರ್ಥಿನಿಯೊಬ್ಬಳ ಮೇಲೆ ಲೈಗಿಕ ದೌರ್ಜನ್ಯ ಎಸಗಿದ ಘಟನೆ ನಡೆದಿದೆ.

ಪೊಲೀಸ್ ಅಧಿಕಾರಿಯಂತೆ ಪೋಸ್ ಕೊಟ್ಟ ವ್ಯಕ್ತಿ ಆಕೆಯ ವಿಡಿಯೋವನ್ನು ಸೋರಿಕೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಆರೋಪಿ ರವಿ ಸೋಲಂಕಿಯನ್ನು ಅಪರಾಧ ವಿಭಾಗದ ತಂಡ ಗುರುವಾರ ಬಂಧಿಸಿದೆ.

ಪ್ರಿಯಕರನೊಂದಿಗಿನ ಖಾಸಗಿ ಕ್ಷಣಗಳ ವೀಡಿಯೊವನ್ನು ಹೊಂದಿರುವ ಬಗ್ಗೆ ವಿದ್ಯಾರ್ಥಿನಿಗೆ ಹೇಳಿ, ಅದನ್ನು ಆಕೆಯ ಪೋಷಕರೊಂದಿಗೆ ಹಂಚಿಕೊಳ್ಳುವುದಾಗಿ ಆರೋಪಿ ಬೆದರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಹಿಳೆ ವಾಸಿಸುತ್ತಿದ್ದ ಗೇಟೆಡ್ ಸೊಸೈಟಿಗೆ ಪ್ರವೇಶಿಸಲು ಆತ ಬಳಸಿದ ಮೋಟಾರ್ ಸೈಕಲ್ ಮತ್ತು ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲಿಸಿದ ನಂತರ ಆರೋಪಿಯನ್ನು ಬಂಧಿಸಲಾಗಿದೆ.

ಜುಲೈ 7 ರಂದು ರಾತ್ರಿ 8.45 ರ ಸುಮಾರಿಗೆ ವಿದ್ಯಾರ್ಥಿನಿಯನ್ನು ಸ್ನೇಹಿತ ಗೇಟ್ ಸೊಸೈಟಿಯ ಹೊರಗೆ ಡ್ರಾಪ್ ಮಾಡಿದ್ದಾನೆ. ಆಕೆ ತನ್ನ ಕಟ್ಟಡದ ಮೆಟ್ಟಿಲನ್ನು ತಲುಪಿದಾಗ, ಆಕೆಗೆ ಪರಿಚಯವಿಲ್ಲದ ವ್ಯಕ್ತಿಯೊಬ್ಬ ಅವಳನ್ನು ಹಿಂಬಾಲಿಸಿ ದೆಹಲಿ ಪೊಲೀಸ್ ಅಧಿಕಾರಿ ಎಂದು ಪರಿಚಯಿಸಿಕೊಂಡು ಗುರುತಿನ ಚೀಟಿ ತೋರಿಸಿದ್ದಾನೆ.

ನಿನ್ನ ಹಾಗೂ ನಿನ್ನ ಗೆಳೆಯನ ನಡುವಿನ ಆತ್ಮೀಯ ಕ್ಷಣಗಳ ವಿಡಿಯೋ ರೆಕಾರ್ಡಿಂಗ್ ತನ್ನ ಬಳಿ ಇದೆ. ಅದನ್ನು ಬಹಿರಂಗಪಡಿಸುತ್ತೇನೆ ಎಂದು ಬೆದರಿಸಿ ನಂತರ, ಕಟ್ಟಡದ ಟೆರೇಸ್‌ಗೆ ತನ್ನನ್ನು ಹಿಂಬಾಲಿಸುವಂತೆ ಹೇಳಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಘಟನೆಯ ಬಗ್ಗೆ ಯಾರೊಂದಿಗಾದರೂ ಮಾತನಾಡಲು ನಿರ್ಧರಿಸಿದರೆ, ವಿಡಿಯೋ ವೈರಲ್ ಮಾಡುವುದಾಗಿ ಹೇಳಿ ಪರಾರಿಯಾಗಿದ್ದಾನೆ. ಯುವತಿ ಪೊಲೀಸರಿಗೆ ದೂರು ನೀಡಿದ್ದು, ತನಿಖೆ ಕೈಗೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ವಿದ್ಯಾರ್ಥಿನಿ ಮತ್ತು ಆಕೆಯ ಪ್ರಿಯಕರನ್ನು ಹಿಂಬಾಲಿಸಿ ಕಾರ್ ನಲ್ಲಿದ್ದಾಗ ಅವರ ಫೋಟೋಗಳನ್ನು ಕ್ಲಿಕ್ಕಿಸಿರುವುದನ್ನು ವಿಚಾರಣೆ ವೇಳೆ ಆರೋಪಿ ಒಪ್ಪಿಕೊಂಡಿದ್ದಾನೆ. ಆರೋಪಿಯು ತನ್ನ ಶಸ್ತ್ರಾಸ್ತ್ರ ಪರವಾನಗಿಯ ಪ್ಲಾಸ್ಟಿಕ್ ಕಾರ್ಡ್ ಹೊಂದಿದ್ದು, ಅದರ ಮೇಲ್ಭಾಗದಲ್ಲಿ ದೆಹಲಿ ಪೊಲೀಸ್ ಮೊನೊಗ್ರಾಮ್ ಮತ್ತು ವಾಟರ್‌ಮಾರ್ಕ್ ಇದೆ. ಅದನ್ನೇ ತೋರಿಸಿ ತಾನು ಪೊಲೀಸ್ ಅಧಿಕಾರಿ ಹೇಳಿಕೊಳ್ಳುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read