ಪಾನಿಪುರಿ ಸವಿದ ಜಪಾನ್ ಹಿರಿಯರು ; ಭಾರತೀಯ ಖಾದ್ಯಕ್ಕೆ ಫಿದಾ | Video

ಭಾರತೀಯ ಸ್ಟ್ರೀಟ್ ಫುಡ್ ಪಾನಿಪುರಿಯನ್ನು ಜಪಾನ್‌ನ ಅಜ್ಜ-ಅಜ್ಜಿಯಂದಿರಿಗೆ ಪರಿಚಯಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಟೋಕಿಯೋ ಮೂಲದ ಮತ್ತು ಪ್ರಸ್ತುತ ಮುಂಬೈನಲ್ಲಿ ನೆಲೆಸಿರುವ ಕೊಕಿ ಶಿಶಿದೋ ಎಂಬ ಯುವಕ ಈ ವಿಡಿಯೋವನ್ನು ಮಾಡಿದ್ದಾರೆ.

ಕೊಕಿ ಮೊದಲು ತಾವೇ ಪಾನಿಪುರಿಯನ್ನು ತಯಾರಿಸಿ, ನಂತರ ಅದನ್ನು ತಮ್ಮ ಅಜ್ಜ-ಅಜ್ಜಿಯಂದಿರಿಗೆ ತಿನ್ನಲು ನೀಡಿದರು. ಮೊದಲ ಬಾರಿಗೆ ಪಾನಿಪುರಿ ತಿಂದ ಅಜ್ಜಿಯ ರಿಯಾಕ್ಷನ್ ಅದ್ಭುತವಾಗಿತ್ತು. ಪಾನಿಪುರಿಯ ರುಚಿಗೆ ಅವರು ಫಿದಾ ಆಗಿದ್ದಾರೆ. ಆದರೆ, ಅಜ್ಜ ಪಾನಿಪುರಿ ತಿಂದ ನಂತರದ ರಿಯಾಕ್ಷನ್ ವಿಡಿಯೋದಲ್ಲಿ ದಾಖಲಾಗಿಲ್ಲ.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾವಿರಾರು ಲೈಕ್ಸ್ ಮತ್ತು ಕಾಮೆಂಟ್‌ಗಳನ್ನು ಪಡೆದುಕೊಂಡಿದೆ. ಈ ಹಿಂದೆ ಕೊಕಿ ತಮ್ಮ ಅಜ್ಜ-ಅಜ್ಜಿಯಂದಿರಿಗೆ ಕೆಲವು ಭಾರತೀಯ ತಿಂಡಿಗಳನ್ನು ಪರಿಚಯಿಸಿದ್ದರು. ಆದರೆ, ಅವರಿಗೆ ಭಾರತೀಯ ಆಹಾರದ ರುಚಿ ಅಷ್ಟಾಗಿ ಇಷ್ಟವಾಗಿರಲಿಲ್ಲ. ಈ ವಿಡಿಯೋ ಆಹಾರವು ಸಂಸ್ಕೃತಿಗಳನ್ನು ಬೆಸೆಯುವ ಶಕ್ತಿಯನ್ನು ಹೊಂದಿದೆ ಎಂಬುದನ್ನು ತೋರಿಸುತ್ತದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read