ಪತ್ನಿ ಪದೇ ಪದೇ ತವರಿಗೆ ಹೋಗುತ್ತಿದ್ದಾಳೆಂದು ಕತ್ತು ಹಿಸುಕಿ ಕೊಂದೇ ಬಿಟ್ಟ ಪತಿ…!

Man Kills Wife He Bought For Rs 70,000; Dumps Body In Delhi's Fatehpur Beri Forest

ಶ್ರದ್ಧಾ ಹತ್ಯೆ ಪ್ರಕರಣ ಇನ್ನೂ ಜನರ ಮನಸ್ಸಿನಿಂದ ಮಾಸಿ ಹೋಗಿಲ್ಲ. ಆ ಘಟನೆಯ ನಂತರ ಒಂದಾದ ಮೇಲೆ ಒಂದು ಹೃದಯವಿದ್ರಾವಕ ಘಟನೆ ರಾಷ್ಟ್ರ ರಾಜಧಾನಿಯಲ್ಲಿ ನಡೆಯುತ್ತಲೇ ಇವೆ. ಈಗ ಮತ್ತೊಂದು ಭಯಾನಕ ಪ್ರಕರಣ ಬೆಳಕಿಗೆ ಬಂದಿದ್ದು, ದೆಹಲಿ ಜನ ಇನ್ನಷ್ಟು ಬೆಚ್ಚಿಬೀಳುವಂತೆ ಮಾಡಿದೆ.

ಪತಿಯೊಬ್ಬ ತನ್ನ ಪತ್ನಿಯನ್ನ ಬರ್ಬರವಾಗಿ ಹತ್ಯೆ ಮಾಡಿ ಕೊನೆಗೆ ಆಕೆಯ ಶವವನ್ನ ಕಾಡಿನಲ್ಲಿ ಎಸೆದು ಹೋಗಿದ್ದಾನೆ. ಈ ಘಟನೆ ದೆಹಲಿಯ ಫತೇಪುರಿ ಬೆರಿ ಪ್ರದೇಶದಲ್ಲಿ ನಡೆದಿದೆ.

ಧರಂವೀರ್, ಪಟ್ನಾದ ಸ್ವೀಟಿಯನ್ನ ಮದುವೆಯಾಗಿ ದೆಹಲಿಗೆ ಕರೆದುಕೊಂಡು ಬಂದಿರುತ್ತಾನೆ. ಮದುವೆಗೂ ಮುಂಚೆ ಆತ 70 ಸಾವಿರ ಕೊಟ್ಟು ಆಕೆಯನ್ನ ಖರೀದಿ ಮಾಡಿರುತ್ತಾನೆ. ಕೆಲ ದಿನಗಳ ಮಟ್ಟಿಗೆ ಇವರಿಬ್ಬರ ಸಂಸಾರ ಚೆನ್ನಾಗಿಯೇ ನಡೆದಿರುತ್ತೆ. ಆ ನಂತರ ಸ್ವೀಟಿ ಪದೇ ಪದೇ ತಾಯಿ ಮನೆಗೆ ಹೋಗುತ್ತಿರುತ್ತಾಳೆ. ಇದು ಧರಂಸಿಂಗ್‌ಗೆ ಸುತರಾಂ ಇಷ್ಟವಿರುವುದಿಲ್ಲ. ಮೊದಲಿಗೆ ಹೆಂಡತಿಗೆ ತಿಳಿಸಿ ಹೇಳುತ್ತಾನೆ. ಕೊನೆಗೆ ವಾದ ವಿವಾದದ ತನಕ ಹೋಗಿರುತ್ತೆ. ಕೊನೆಗೊಂದು ದಿನ ತಾಳ್ಮೆ ಕಳೆದುಕೊಂಡ ಈತ ಆಕೆಯನ್ನ ತನ್ನ ಇಬ್ಬರು ಸೋದರಳಿಯರಾದ ಸತ್ಯವಾನ್‌ ಮತ್ತು ಅರುಣ್‌ ಜೊತೆ ಸೇರಿ ಕತ್ತುಹಿಸುಕಿ ಕೊಲೆ ಮಾಡಿ, ಆಕೆಯ ಶವವನ್ನ ಆಟೋ ಒಂದರಲ್ಲಿ ಹಾಕಿಕೊಂಡು ಕೊನೆಗೆ ಅರಣ್ಯದಲ್ಲಿ ಎಸೆದು ಬಿಡುತ್ತಾರೆ.

ಆಗಸ್ಟ್‌ 5ರಂದು ಖುರ್ದ್ ಸರೋವರದ ಗಡಿಯ ಬಳಿ ಇರುವ ಕಾಡಿನಲ್ಲಿ, ಸ್ಥಳೀಯರು ಅಪರಿಚಿತ ಮಹಿಳೆಯ ಶವ ನೋಡಿದ್ದಾರೆ. ಪೊಲೀಸರಿಗೆ ಈ ವಿಷಯ ತಿಳಿಸಿದ ನಂತರ, ಅವರು ಸ್ಥಳಕ್ಕೆ ಬಂದು ಶವ ಯಾರದ್ದು ಅಂತ ಕಂಡು ಹಿಡಿಯಲು ವಿಫಲರಾಗಿದ್ದಾರೆ. ಆದರೆ ಅಲ್ಲೇ ಓಡಾಡುತ್ತಿದ್ದ ಆಟೋ ರಿಕ್ಷಾ ಚಾಲಕನ ಚಲನವನದ ಅನುಮಾಸ್ಪದವಾಗಿ ಕಂಡು ಬಂದಿದ್ದರಿಂದ, ಆತನನ್ನ ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ,

ಮಹಿಳೆ ಪದೇ ಪದೇ ತವರಿಗೆ ಹೋಗುತ್ತಿದ್ದ ಕಾರಣಕ್ಕಾಗಿಯೇ ಕೊಲೆ ನಡೆದಿರುವುದಾಗಿ ಆಟೋ ಚಾಲಕ ಬಾಯಿ ಬಿಟ್ಟಿದ್ದಾನೆ. ಎಂದು ಮಾಧ್ಯಮಕ್ಕೆ ಪೊಲೀಸರು ಮಾಹಿತಿ ಕೊಟ್ಟಿದ್ದಾರೆ.

ಪೊಲೀಸರಿಗೆ ಸಿಕ್ಕಿರುವ ಸಾಕ್ಷಾಧಾರಗಳ ಆಧಾರದ ಮೇಲೆ ಫತೇಪುರು ಬೆರಿ ಪೊಲೀಸ್‌ ಠಾಣೆಯಲ್ಲಿ ಸೆಕ್ಷನ್ 302, 201 ಮತ್ತು 34ರ ಅಡಿಯಲ್ಲಿ ಮೂವರ ವಿರುದ್ಧ ಎಫ್‌ಐಆರ್‌ ದಾಖಲಿಸಿ ಬಂಧಿಸಿದ್ದಾರೆ. ಹಾಗೂ ಶವವನ್ನ ಸಾಗಿಸಲು ಬಳಸಿದ್ದ ಆಟೋವನ್ನ ವಶಪಡಿಸಿಕೊಳ್ಳಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read