ನೆಲಮಂಗಲ: ಪತ್ನಿ ಜೊತೆ ಸಾಯಂಕಾಲ ಸ್ನ್ಯಾಕ್ಸ್ ತಿನ್ನಲೆಂದು ಮನೆಯಿಂದ ಹೊರ ಹೋದವನು ಕಿಡ್ನ್ಯಾಪ್ ಆಗಿ ಕೊಲೆಯಾಗಿರುವ ಘಟನೆ ತುಮಕೂರಿನ ಜಯಪುರದಲ್ಲಿ ನಡೆದಿದೆ.
ಸೋಲೂರು ಮೂಲದ ದಿಲೀಪ್ ಮೃತ ದುರ್ದೈವಿ. ದಾಬಸ್ ಪೇಟೆಯಲ್ಲಿ ಕಾರ್ಗೊ ನಡೆಸುತ್ತಿದ್ದ. ಸೋಲೂರಿನ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದ ದಿಪೀಲ್, ೫ ವರ್ಷಗಳ ಹಿಂದೆ ಅದೇ ಮನೆಯ ಮಾಲೀಕನ ಪತ್ನಿಯನ್ನೇ ಪ್ರೀತಿಸಿ ಆಕೆಯನ್ನು ವಿವಾಹವಾಗಿದ್ದ. ಇದು ದಿಲೀಪ್ ಕುಟುಂಬದವರ ಆಕ್ರೋಶಕ್ಕೂ ಕಾರಣವಾಗಿತ್ತು.
ಎಂದಿನಂತೆ ಪತಿ-ಪತ್ನಿ ಇಬ್ಬರೂ ನೆಲಮಂಗಲಕ್ಕೆ ಸ್ನ್ಯಾಕ್ಸ್ ತಿನ್ನಲು ಬರುತ್ತಿದ್ದರು. ಹೀಗೆ ಇಂದು ಕೂಡ ಪತ್ನಿ ಜೊತೆ ದಿಲೀಪ್ ಬಂದಿದ್ದಾನೆ. ಈ ವೇಳೆ ಐದಾರು ಜನ ದುಷ್ಕರ್ಮಿಗಳ ತಂಡ ದಿಲೀಪ್ ಮೇಲೆ ದಾಳಿ ನಡೆಸಿ ಕಿಡ್ನ್ಯಾಪ್ ಮಾಡಿದ್ದಾರೆ. ಬಳಿಕ ಹತ್ಯೆಗೈದು ಆತನನ್ನು ಜಯಪುರ ಬಳಿ ನಿರ್ಜನ ಪ್ರದೇಶದಲ್ಲಿ ಎಸೆದು ಹೋಗಿದ್ದಾರೆ.
ಘಟನಾ ಸ್ಥಳಕ್ಕೆ ತಿಲಕ್ ಪಾರ್ಕ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಗಳ ಪತ್ತೆಯಾಗಿ ಪೊಲೀಸರು ತನಿಖೆ ನಡೆಸಿದ್ದಾರೆ.