Watch Video: ಮತ್ತೆ ಸುದ್ದಿಯಾಯ್ತು ದೆಹಲಿ ಮೆಟ್ರೋ; ಚಪ್ಪಲಿಯಲ್ಲಿ ಹೊಡೆದಾಡಿಕೊಂಡ ಪ್ರಯಾಣಿಕರು…!

ದೆಹಲಿ ಮೆಟ್ರೋ ಸದಾ ಸುದ್ದಿಯಲ್ಲಿರುತ್ತದೆ. ಜಗಳ, ಗಲಾಟೆ, ಮನರಂಜನೆ ಸೇರಿದಂತೆ ಒಂದಲ್ಲ ಒಂದು ವಿಷ್ಯಕ್ಕೆ ಅದು ಚರ್ಚೆಯಲ್ಲಿರುತ್ತದೆ. ಈಗ ದೆಹಲಿ ಮೆಟ್ರೋದ ಇನ್ನೊಂದು ವಿಡಿಯೋ ವೈರಲ್‌ ಆಗಿದೆ. ಈ ಬಾರಿ ಇಬ್ಬರು ಚಪ್ಪಲಿ ಹಿಡಿದು ಹೊಡೆದಾಡಿಕೊಂಡಿದ್ದಾರೆ. ವೈರಲ್‌ ಆದ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಚಪ್ಪಲಿ ಹಿಡಿದು ಇನ್ನೊಬ್ಬನಿಗೆ ಹೊಡೆಯುತ್ತಾನೆ. ಚಪ್ಪಲಿ ಏಟು ತಿಂದ ವ್ಯಕ್ತಿ, ಕಪಾಳಮೋಕ್ಷ ಮಾಡ್ತಾನೆ. ಅಲ್ಲದೆ ಚಪ್ಪಲಿ ಏಟು ನೀಡಿದ ವ್ಯಕ್ತಿಯನ್ನು ತಳ್ಳಿ ಕೆಳಗೆ ಬೀಳಿಸ್ತಾನೆ.

ಅಲ್ಲಿಗೆ ಇವರ ಜಗಳ ಮುಗಿಯೋದಿಲ್ಲ. ಬಿದ್ದ ವ್ಯಕ್ತಿ ಎದ್ದು ನಿಂತು ಮತ್ತೆ ದಾಳಿಗೆ ಮುಂದಾಗ್ತಾನೆ. ಆದ್ರೆ ಮಧ್ಯೆ ಬರುವ ಪ್ರಯಾಣಿಕನೊಬ್ಬ ಈತನನ್ನು ತಡೆಯುತ್ತಾನೆ. ಇವರಿಬ್ಬರ ಗಲಾಟೆಗೆ ಕಾರಣವೇನು ಎಂಬುದು ತಿಳಿದಿಲ್ಲ.

ಘರ್ ಕೆ ಕ್ಲಾಶ್ ಹೆಸರಿನ ಎಕ್ಸ್‌ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಒಂದುವರೆ ಲಕ್ಷಕ್ಕೂ ಹೆಚ್ಚು ಬಾರಿ ಈ ವಿಡಿಯೋವನ್ನು ವೀಕ್ಷಣೆ ಮಾಡಲಾಗಿದೆ. ಈ ವಿಡಿಯೋ ನೋಡಿದ ಬಳಕೆದಾರರು, ದೆಹಲಿ ಮೆಟ್ರೋದಲ್ಲಿ ಎಲ್ಲವೂ ನೋಡಲು ಸಿಗುತ್ತದೆ ಎಂದು ಬರೆದಿದ್ದಾರೆ. ಇನ್ನೊಬ್ಬರು, ಚಪ್ಪಲಿಯಲ್ಲಿ ಹೊಡೆದ ವ್ಯಕ್ತಿ ಮದ್ಯಪಾನ ಮಾಡಿದಂತೆ ಕಾಣ್ತಿದೆ ಎಂದು ಕಮೆಂಟ್‌ ಮಾಡಿದ್ದಾರೆ.

https://twitter.com/gharkekalesh/status/1818237435572305934?ref_src=twsrc%5Etfw%7Ctwcamp%5Etweetembed%7Ctwterm%5E1818237435572305934%7Ctwgr%5E533db292b1e4580aa38912ec3a2fe7338500060f%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fenglish%2Fzeenews-epaper-dh9946c0e104864447858bd53362c2ea6c%2Fdelhimetrotrainviralnewsmanslapstheotherwithchappalreceivesareturnthappadwatchvideo-newsid-n624474512

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read