ಪ್ರಾಣಿ, ಪಕ್ಷಿಗಳ ಮೇಲೆ ಅಮಾನವೀಯ ವರ್ತನೆ ತೋರುವವರು ಒಂದೆಡೆಯಾದರೆ, ಅವುಗಳನ್ನು ಪ್ರೀತಿಯಿಂದ ನೋಡುವವರ ಇನ್ನೊಂದು ವರ್ಗವಿದೆ. ಈ ಎರಡನೆಯ ಸಾಲಿಗೆ ಸೇರಿರುವ ವ್ಯಕ್ತಿಯೊಬ್ಬರ ವಿಡಿಯೋ ಈಗ ವೈರಲ್ ಆಗಿದೆ.
2014 ರಲ್ಲಿ ಚಿತ್ರೀಕರಿಸಲಾಗಿದ್ದ ಈ ವಿಡಿಯೋ ಪುನಃ ವೈರಲ್ ಆಗಿದೆ. ಇದರಲ್ಲಿ ಬೇಲಿಯೊಳಗೆ ಕೆಟ್ಟದಾಗಿ ಸಿಲುಕಿಕೊಂಡ ಹಂಸದ ಮರಿಯನ್ನು ವ್ಯಕ್ತಿಯೊಬ್ಬ ಕಾಪಾಡುತ್ತಿರುವುದನ್ನು ನೋಡಬಹುದು.
ಆದರೆ ಆ ಮರಿಯ ತಾಯಿಗೆ ತನ್ನ ಮಗುವಿಗೆ ಏನೋ ಸಂಕಷ್ಟ ಎದುರಾಗಿದೆ ಎನ್ನುವುದು ಅಷ್ಟೇ ಗೊತ್ತು. ಆದರೆ ಈ ವ್ಯಕ್ತಿ ಅದನ್ನು ರಕ್ಷಿಸುತ್ತಿದ್ದಾನೆ ಎನ್ನುವ ಅರಿವು ಇಲ್ಲ. ಬೇಲಿಯಲ್ಲಿ ಸಿಲುಕಿಕೊಂಡಿರುವ ಮರಿ ನೋವಿನಿಂದ ಕಿರುಚುತ್ತಿದ್ದಾಗ ಈ ಅಮ್ಮ ಈ ವ್ಯಕ್ತಿಯೇ ಏನೋ ಮಾಡುತ್ತಿದ್ದಾನೆ ಎಂದು ಭಾವಿಸಿ ಆತನನ್ನು ಕುಕ್ಕಿ ಕುಕ್ಕಿ ಇಡುತ್ತಿದೆ.
ಆದರೆ ಸಂಯದ ಕಳೆದುಕೊಳ್ಳದ ವ್ಯಕ್ತಿ ಅಮ್ಮನನ್ನು ಆ ಕಡೆ ನೂಕುತ್ತಾ ಮರಿಯನ್ನು ರಕ್ಷಿಸಿ ಕೊನೆಗೆ ಅಮ್ಮನ ಬಳಿ ಬಿಡುವ ವಿಡಿಯೋ ಇದಾಗಿದೆ. ಈ ರಕ್ಷಕನಿಗೆ ಶ್ಲಾಘನೆಗಳ ಮಹಾಪೂರವೇ ಹರಿದುಬಂದಿದೆ.
https://twitter.com/TheFigen_/status/1631263090502254594?ref_src=twsrc%5Etfw%7Ctwcamp%5Etweetembed%7Ctwterm%5E1631263090502254594%7Ctwgr%5Ef9ddb0155043a165e51322de73abe9666598cbd9%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fman-gets-attacked-by-mother-swan-while-saving-its-baby-stuck-in-fence-old-video-goes-viral-2341850-2023-03-02