’ಕೊನೆಗೂ ಬೆಂಗಳೂರಿನಲ್ಲಿ ಸುಸಜ್ಜಿತ ಮನೆ ಸಿಕ್ಕಿತು’: ಮನೆ ಹುಡುಕುವ ಬಗ್ಗೆ ಹೇಳಿದ ನೆಟ್ಟಿಗ

ತನ್ನ ಸಾಮರ್ಥ್ಯ ಮೀರಿದ ಜನಸಂಖ್ಯೆಯಿಂದಾಗಿ ರಾಜಧಾನಿ ಬೆಂಗಳೂರಿನ ಐಟಿ ಕಂಪನಿಯೊಂದರಲ್ಲಿ ಸಂದರ್ಶನದಲ್ಲಿ ಪಾಸ್ ಆಗುವುದಕ್ಕಿಂತ ಕಷ್ಟವಾದ ವಿಚಾರವೆಂದರೆ ಬಾಡಿಗೆ ಮನೆ ಹುಡುಕುವುದು.

ಈ ಪರಸ್ಥಿತಿಯನ್ನು ವಿನೋದಮಯವಾಗಿ ತೋರಿರುವ ನೆಟ್ಟಿಗರೊಬ್ಬರು, ತಾವೆಷ್ಟು ಪುಟ್ಟ ಜಾಗದಲ್ಲಿ ವಾಸಿಸುತ್ತಿದ್ದಾರೆ ಎಂದು ತೋರುವ ಚಿತ್ರವೊಂದನ್ನು ಹಂಚಿಕೊಂಡಿದ್ದಾರೆ.

“ಬೆಂಗಳೂರಿನಲ್ಲಿ ಕೊನೆಗೂ ಒಂದು ಸುಸಜ್ಜಿತ ಮನೆಯೊಂದನ್ನು ಪತ್ತೆ ಮಾಡಿದೆ. ಗೇಟೆಡ್ ಸೊಸೈಟಿ ಹಾಗೂ 24/7 ಸೆಕ್ಯೂರಿಟಿ ಎಲ್ಲಾ ಇದೆ,” ಎಂದು ಕ್ಯಾಪ್ಷನ್ ಕೊಟ್ಟು ಈ ಕಿರಿದಾದ ಮನೆಯ ಚಿತ್ರವೊಂದನ್ನು ವ್ಯಂಗ್ಯವಾಗಿ ಶೇರ್‌ ಮಾಡಿದ್ದಾರೆ ಮಂಥನ್ ಗುಪ್ತಾ ಹೆಸರಿನ ಈ ನೆಟ್ಟಿಗ.

ಈ ಟ್ವೀಟ್‌ಗೆ ಭಾರೀ ತಮಾಷೆಯ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದು, ಕಾಮೆಂಟ್‌ಗಳ ಮೂಲಕ ನೆಟ್ಟಿಗರು ಖುದ್ದು ತಮ್ಮದೇ ಅನುಭವಗಳ ಮಾತುಗಳನ್ನು ಆಡಿದ್ದಾರೆ. “ಕೋಣೆಯಲ್ಲಿ ಸೂರ್ಯನ ಬೆಳಕು ಸಿಗುವ ಕಾರಣ ಇಲ್ಲಿ ವಾಸಿಸುವ ಯಾರೇ ಆದರೂ ಅದೃಷ್ಟವಂತರು,” ಎಂದು ಹೇಳಿದ್ದಾರೆ.

“ಇದು ನನ್ನ ಕೋಣೆಗಿಂತ ಕೇವಲ 20% ಚಿಕ್ಕದು. ನನಗೆ ಭದ್ರತೆಯೂ ಇಲ್ಲ,” ಎನ್ನುತ್ತದೆ ಮತ್ತೊಂದು ಟ್ವೀಟ್.

https://twitter.com/manthanguptaa/status/1641671094418673665?ref_src=twsrc%5Etfw%7Ctwcamp%5Etweetembed%7Ctwterm%5E1641671094418673665%7Ctwgr%5Ec301289d6967f8d8b40e04c3b29e757bd483e71c%7Ctwcon%5Es1_&ref_url=https%3A%2F%2Fwww.news18.com%2Fbuzz%2Fman-finally-gets-a-fully-furnished-house-in-bengaluru-but-wait-for-the-catch-7441837.html

https://twitter.com/farzandfz/status/1641690417887600641?ref_src=twsrc%5Etfw%7Ctwcamp%5Etweetembed%7Ctwterm%5E1641690417887600641%7Ctwgr%5E96e3f1ba56cf88a6f61e9ebbcc215a4cdafa6b71%7Ctwcon%5Es1_&ref_url=https%3A%2F%2Fwww.news18.com%2Fbuzz%2Fman-finally-gets-a-fully-furnished-house-in-bengaluru-but-wait-for-the-catch-7441837.html

https://twitter.com/kritarthmittal/status/1641721448552337408?ref_src=twsrc%5Etfw%7Ctwcamp%5Etweetembed%7Ctwterm%5E1641721448552337408%7Ctwgr%5E96e3f1ba56cf88a6f61e9ebbcc215a4cdafa6b71%7Ctwcon%5Es1_&ref_url=https%3A%2F%2Fwww.news18.com%2Fbuzz%2Fman-finally-gets-a-fully-furnished-house-in-bengaluru-but-wait-for-the-catch-7441837.html

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read