ಮುಂಬೈನ ಸ್ಥಳೀಯ ರೈಲೊಂದರಲ್ಲಿ ಯುವಕನೊಬ್ಬ ಡ್ರಗ್ಸ್ ಸೇವಿಸ್ತಿರುವ ವಿಡಿಯೋ ವೈರಲ್ ಆಗಿದೆ. ಮಹಿಳಾ ಕೋಚ್ ನ ಫುಟ್‌ಬೋರ್ಡ್‌ನಲ್ಲಿ ನಿಂತ ಆತ ಕರವಸ್ತ್ರವನ್ನು ಪದೇ ಪದೇ ತನ್ನ ಬಾಯಿಗೆ ಇಟ್ಟುಕೊಂಡು ಅದರಲ್ಲಿನ ಡ್ರಗ್ಸ್ ಸೇವಿಸುವ ಮೂಲಕ ರೈಲಿನಲ್ಲಿ ಅಮಲೇರಿಸಿಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ.
ಟ್ವಿಟರ್ ಬಳಕೆದಾರರೊಬ್ಬರು ಘಟನೆಯ ವೀಡಿಯೊವನ್ನು ರೆಕಾರ್ಡ್ ಮಾಡಿ ಅದನ್ನು ಆನ್‌ಲೈನ್‌ನಲ್ಲಿ ಹಂಚಿಕೊಂಡಿದ್ದಾರೆ. ಅದರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ರೈಲ್ವೆ ಸಚಿವಾಲಯ ಮತ್ತು ನಗರ ಪೊಲೀಸರ ಗಮನ ಸೆಳೆಯಲು ಪ್ರಯತ್ನಿಸಿದ್ದಾರೆ.
ಸ್ಥಳೀಯ ರೈಲಿನ ನಿಖರವಾದ ಮಾರ್ಗವನ್ನೂ ಸಾಮಾಜಿಕ ಮಾಧ್ಯಮ ಪೋಸ್ಟ್ ನಲ್ಲಿ ಉಲ್ಲೇಖಿಸಲಾಗಿದೆ. ವೀಡಿಯೊ ಪೋಸ್ಟ್ ಗೆ ಪ್ರತಿಕ್ರಿಯಿಸಿದ ಸೆಂಟ್ರಲ್ ರೈಲ್ವೇ, ವಿಭಾಗೀಯ ರೈಲ್ವೆ ಮ್ಯಾನೇಜರ್‌ಗೆ ಈ ವಿಷಯದ ಬಗ್ಗೆ ಗಮನ ಹರಿಸುವಂತೆ ಸೂಚಿಸಿದೆ. .ಏತನ್ಮಧ್ಯೆ ಮುಂಬೈ ಪೊಲೀಸರು ಇದನ್ನು ಪರಿಶೀಲಿಸಲು ಮುಂಬೈ ನಗರದ ರೈಲ್ವೆ ಪೊಲೀಸರಿಗೆ ಪೋಸ್ಟ್ ಟ್ಯಾಗ್ ಮಾಡಿದ್ದಾರೆ. ಸಂಸದೆ ಮತ್ತು ಎನ್‌ಸಿಪಿ ಕಾರ್ಯಾಧ್ಯಕ್ಷೆ ಸುಪ್ರಿಯಾ ಸುಳೆ ಅವರು ಸಹ ಈ ವಿಡಿಯೋಗೆ ಪ್ರತಿಕ್ರಿಯಿಸಿದ್ದಾರೆ .
ಸಾರ್ವಜನಿಕ ಸಾರಿಗೆಯಲ್ಲಿ ಮಹಿಳೆಯರ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು “ಈ ಯುವಕ, ಮಹಿಳೆಯರ ಕೋಚ್ ನೊಳಗೆ ಡ್ರಗ್ಸ್ ಸೇವಿಸುವ ವೀಡಿಯೊ ಮಹಿಳೆಯರ ಸುರಕ್ಷತೆಯ ಬಗ್ಗೆ ಸ್ಪಷ್ಟವಾದ ಅಭಿಪ್ರಾಯವನ್ನು ನೀಡುವುದಲ್ಲದೆ, ಯುವಕರು ಈ ಮಾದಕ ದ್ರವ್ಯಗಳನ್ನು ಮುಕ್ತವಾಗಿ ಪಡೆಯುತ್ತಿದ್ದಾರೆ ಎಂದು ವಿವರಿಸುತ್ತದೆ. ರೈಲ್ವೆ ಭದ್ರತೆ ಮತ್ತು ಮುಂಬೈ ಪೊಲೀಸರು ಸಮನ್ವಯದಿಂದ ಕೆಲಸ ಮಾಡಿದರೆ ಮಾತ್ರ ಇಂತಹ ಚಟುವಟಿಕೆಗಳನ್ನು ನಿಲ್ಲಿಸಬಹುದು. ರೈಲ್ವೇ ಸಚಿವ ಅಶ್ವಿನಿಜಿ ವೈಷ್ಣವ್ ಮತ್ತು ಮಹಾರಾಷ್ಟ್ರ ಗೃಹ ಸಚಿವರು ಈ ವಿಡಿಯೋವನ್ನು ಗಮನಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದ್ದಾರೆ.
https://twitter.com/SamruddhiThaka7/status/1714595496143331708?ref_src=twsrc%5Etfw%7Ctwcamp%5Etweetembed%7Ctwterm%5E1714595496143331708%7Ctwgr%5E97da9f49fbdac04e66afb670a5058523416b0274%7Ctwcon%5Es1_&ref_url=https%3A%2F%2Fwww.freepressjournal.in%2Fviral%2Fviral-video-man-enters-ladies-coach-of-mumbai-local-allegedly-sucks-drug-from-handkerchief-during-travel-on-footboard
https://twitter.com/supriya_sule/status/1715001067480707445?ref_src=twsrc%5Etfw%7Ctwcamp%5Etweetembed%7Ctwterm%5E1715001067480707445%7Ctwgr%5E97da9f49fbdac04e66afb670a5058523416b0274%7Ctwcon%5Es1_&ref_url=https%3A%2F%2Fwww.freepressjournal.in%2Fviral%2Fviral-video-man-enters-ladies-coach-of-mumbai-local-allegedly-sucks-drug-from-handkerchief-during-travel-on-footboard