ದಿಢೀರನೇ ಹೃದಯಾಘಾತವಾಗಿ ಜನ ಸಾವನ್ನಪ್ಪುತ್ತಿರುವ ಘಟನೆಗಳು ಇತ್ತೀಚಿಗೆ ಹೆಚ್ಚಾಗುತ್ತಿವೆ. ಅಂಥದ್ದೊಂದು ಆಘಾತಕಾರಿ ವಿಡಿಯೋ ಹೊರಬಿದ್ದಿದ್ದು ತೆಲಂಗಾಣದಲ್ಲಿ ವ್ಯಕ್ತಿಯೊಬ್ಬರು ತಮ್ಮ ಮನೆಬಾಗಿಲ ಹೊರಗೆ ನಿಂತಿದ್ದ ವೇಳೆಯೇ ಹೃದಯಾಘಾತವಾಗಿ ಸಾವನ್ನಪ್ಪಿದ್ದಾರೆ. ಈ ವಿಡಿಯೋ ವೈರಲ್ ಆಗ್ತಿದ್ದು ಆಘಾತ ಹುಟ್ಟಿಸಿದೆ.
ಮೃತರನ್ನು ಪೆಡಪಲ್ಲಿ ಜಿಲ್ಲೆಯ ಡಿಸಿಸಿ ಅಧ್ಯಕ್ಷ ರಾಜ್ ಠಾಕೂರ್ ಅವರ ಸಹೋದರ ಠಾಕೂರ್ ಶೈಲೇಂದರ್ ಸಿಂಗ್ ಎಂದು ಗುರುತಿಸಲಾಗಿದೆ. ವೀಡಿಯೋದಲ್ಲಿ ಶೈಲೇಂದರ್ ಎಂದಿನಂತೆ ಮನೆಯಿಂದ ಹೊರಬಂದಿದ್ದಾರೆ.
ಮನೆಯಲ್ಲಿ ಯಾರೂ ಇಲ್ಲದ ಕಾರಣ ಡೋರ್ ಲಾಕ್ ಮಾಡಿ ಲಿಫ್ಟ್ ಬಟನ್ ಒತ್ತಿದ ಸ್ವಲ್ಪ ಸಮಯದ ನಂತರ ಅವರು ಸ್ವಲ್ಪ ಆಲಸ್ಯ ಅನುಭವಿಸಿ ಗೋಡೆಯನ್ನು ಹಿಡಿದುಕೊಂಡಿದ್ದಾರೆ.
ನಂತರ ಅವರು ಇದ್ದಕ್ಕಿದ್ದಂತೆ ಕುಸಿದು ಬಿದ್ದು, ಕೆಲವೇ ಸೆಕೆಂಡುಗಳಲ್ಲಿ ಪ್ರಾಣ ಕಳೆದುಕೊಂಡರು. ಸುತ್ತಮುತ್ತ ಯಾರೂ ಇಲ್ಲದ ಕಾರಣ ಬಹಳ ಹೊತ್ತಿನವರೆಗೂ ಯಾರೂ ಗಮನಿಸಿರಲಿಲ್ಲ. ಶೈಲೇಂದರ್ ಕೆಳಗೆ ಬಿದ್ದು ಸಾವನ್ನಪ್ಪಿರುವ ದೃಶ್ಯಗಳು ಸೊಸೈಟಿಯ ಸಿಸಿ ಟಿವಿ ಕ್ಯಾಮೆರಾದಲ್ಲಿ ದಾಖಲಾಗಿವೆ. ಇದರೊಂದಿಗೆ ಈಗಾಗಲೇ ನಡೆದಿರುವ ಇಂತದ್ದೇ ಘಟನೆಯ ವಿಡಿಯೋಗಳು ಸಹ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.
https://twitter.com/jsuryareddy/status/1632086358629171201?ref_src=twsrc%5Etfw%7Ctwcamp%5Etweetembed%7Ctwterm%5E1632086358629171201%7Ctwgr%5E31ef7e1ae4dc243f4a19f7602227aca5e4d3895b%7Ctwcon%5Es1_&ref_url=https%3A%2F%2Fwww.freepressjournal.in%2Findia%2Fman-dies-due-to-heart-attack-right-outside-house-in-telanganas-pedapalli-shocking-video-emerges
https://twitter.com/jsuryareddy/status/1631658245420097537?ref_src=twsrc%5Etfw%7Ctwcamp%5Etweetembed%7Ctwterm%5E1632086358629171201%7Ctwgr%5E31ef7e1ae4dc243f4a19f7602227aca5e4d3895b%7Ctwcon%5Es2_&ref_url=https%3A%2F%2Fwww.freepressjournal.in%2Findia%2Fman-dies-due-to-heart-attack-right-outside-house-in-telanganas-pedapalli-shocking-video-emerges