ಮಂಗಳೂರು: ಹಲಸಿನ ಹಣ್ಣು ಕೊಯ್ಯಲು ಮರ ಹತ್ತಿದ ವೇಳೆ ವಿದ್ಯುತ್ ಸ್ಪರ್ಶಿಸಿ ವ್ಯಕ್ತಿಯೊಬ್ಬರು ಸಾವನ್ನಪ್ಪಿದ ಘಟನೆ ಕೊಣಾಜೆ ಪಜೇರು ಆಡ್ಕ ಬಳಿ ನಡೆದಿದೆ.
ಅಬ್ದುಲ್ ರಜಾಕ್(52) ಮೃತಪಟ್ಟ ವ್ಯಕ್ತಿ ಎಂದು ಹೇಳಲಾಗಿದೆ. ಮನೆಯ ಸಮೀಪ ಹಲಸಿನ ಹಣ್ಣು ಕೊಯ್ಯಲು ಮರ ಹತ್ತಿದ ವೇಳೆ ವಿದ್ಯುತ್ ಸ್ಪರ್ಶಿಸಿ ಕೆಳಗೆ ಬಿದ್ದಿದ್ದಾರೆ. ಸುಮಾರು ಹೊತ್ತಾದರೂ ಅಬ್ದುಲ್ ರಜಾಕ್ ಮನೆಗೆ ಬಾರದ ಕಾರಣ ಅವರ ಪತ್ನಿ ಮರದ ಬಳಿ ಹೋಗಿ ನೋಡಿದಾಗ ಕೆಳಗೆ ಪ್ರಜ್ಞೆ ತಪ್ಪಿ ಬಿದ್ದಿರುವುದು ಕಂಡು ಬಂದಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಟೈಲರ್ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದ ಅಬ್ದುಲ್ ರಜಾಕ್ ಅವರು ಭಾರತ್ ಸೋಶಿಯಲ್ ವೆಲ್ಫೇರ್ ಟ್ರಸ್ಟ್ ನಲ್ಲಿ ಸಕ್ರಿಯರಾಗಿದ್ದರು.