ದೇವರ ದರ್ಶನಕ್ಕೆಂದು ಹೋದ ವ್ಯಕ್ತಿ: ಹಳ್ಳದ ನೀರಿನಲ್ಲಿ ಕೊಚ್ಚಿ ಹೋಗಿ ದುರ್ಮರಣ

ಬೆಳಗಾವಿ: ದೇವರ ದರ್ಶನಕ್ಕೆಂದು ಹೋಗಿದ್ದ ವ್ಯಕ್ತಿ ಹಳ್ಳದ ನೀರಿನಲ್ಲಿ ಕೊಚ್ಚಿ ಹೋಗಿ ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ನಡೆದಿದೆ.

ಚಿಕ್ಕೋಡಿಯಾದ್ಯಂತ ಕಳೆದ ಎರಡು ದಿನಗಳಿಂದ ಭಾರಿ ಮಳೆಯಾಗುತ್ತಿದ್ದು, ನದಿ, ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ. ಅಥಣಿ ಪಟ್ಟಣದ ನಿವಾಸಿ ಗುರುರಾಜ್ ಈರಪ್ಪ ಯಾದವಾಡ ಎಂಬುವವರು (72) ಎಂದಿನಂತೆ ಮಠ, ಮಂದಿರಗಲಿಗೆ ತೆರಳಿ ದೇವರ ದರ್ಶನ ಮಾಡುತ್ತಿದ್ದರು.

ಸೈಕಲ್ ನಲ್ಲಿ ತೆರಳಿದ್ದ ಗುರುರಾಜ್ ಮಾರ್ಗಮಧ್ಯೆಯೇ ನಿಯಂತ್ರಣ ತಪ್ಪಿ ಮಸೂಬಾ ಹಳ್ಳಕ್ಕೆ ಬಿದ್ದಿದ್ದಾರೆ, ನೀರಿನ ರಭಸಕ್ಕೆ ಕೊಚ್ಚಿ ಹೋಗಿ ಸಾವನ್ನಪ್ಪಿದ್ದಾರೆ.

ಅಥಣಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಮೃತದೇಹವನ್ನು ಹಳ್ಳದಿಂದ ಮೇಲಕೆತ್ತಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read