ಹೈ-ವೋಲ್ಟೇಜ್ ಎಲೆಕ್ಟ್ರಿಕ್ ಟವರ್ ಹತ್ತಿ ಡ್ಯಾನ್ಸ್ ಮಾಡಿದ ಭೂಪ: ಶಾಕಿಂಗ್ ವಿಡಿಯೋ

ಆಘಾತಕಾರಿ ಮತ್ತು ವಿಲಕ್ಷಣ ಘಟನೆಯೊಂದರಲ್ಲಿ, ಉತ್ತರ ಪ್ರದೇಶದ ನೋಯ್ಡಾದಲ್ಲಿ ಭಾನುವಾರ ವ್ಯಕ್ತಿಯೊಬ್ಬ ಹೈವೋಲ್ಟೇಜ್ ಎಲೆಕ್ಟ್ರಿಕ್ ಟವರ್ ಏರಿ ಡ್ಯಾನ್ ಮಾಡಿದ್ದಾನೆ.

ನೋಯ್ಡಾದ ಸೆಕ್ಟರ್ 113 ರಲ್ಲಿ ಈ ಘಟನೆ ನಡೆದಿದ್ದು, ಕುಡಿದ ಮತ್ತಿನಲ್ಲಿದ್ದ ವ್ಯಕ್ತಿ ಹೈಟೆನ್ಷನ್ ಕಂಬವನ್ನು ಹತ್ತಿ ಕುಣಿಯಲು ಆರಂಭಿಸಿದ. ಮಧ್ಯಾಹ್ನ 1:30ರ ಸುಮಾರಿಗೆ ಈ ಘಟನೆ ನಡೆದಿದ್ದು, ಪೊಲೀಸರು, ಅಗ್ನಿಶಾಮಕ ದಳ, ವಿದ್ಯುತ್ ಇಲಾಖೆ ಅಧಿಕಾರಿಗಳು ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಈ ವಿಡಿಯೋ ಜಾಲತಾಣಗಳಲ್ಲಿ ಹರಿದಾಡಿದೆ.

ವ್ಯಕ್ತಿ ಗೋಪುರದ ಮೇಲ್ಭಾಗದಲ್ಲಿ ನಿಂತು ನೃತ್ಯ ಮಾಡುವುದನ್ನು ಕಾಣಬಹುದು. ಸೆಕ್ಟರ್ 113 ಪೊಲೀಸ್ ಠಾಣಾ ವ್ಯಾಪ್ತಿಯ ಮೆಟ್ರೋ ನಿಲ್ದಾಣದ ಬಳಿ ಇರುವ ವಿದ್ಯುತ್ ಕಂಬದ ಬಳಿ ಅಪಾರ ಜನರು ಜಮಾಯಿಸಿ ಕೆಳಗಿಳಿಯುವಂತೆ ಮನವೊಲಿಸಲು ಪ್ರಯತ್ನಿಸಿದ್ದಾರೆ.

ಪೊಲೀಸರು ಮತ್ತು ಅಗ್ನಿಶಾಮಕ ದಳದ ಅಧಿಕಾರಿಗಳ ಮಧ್ಯಸ್ಥಿಕೆಯ ನಂತರ ವ್ಯಕ್ತಿ ಎರಡು ಗಂಟೆಗಳ ನಂತರ ಕಂಬದಿಂದ ಕೆಳಗಿಳಿದಿದ್ದಾನೆ. ವಿದ್ಯುತ್ ತಂತಿಗಳ ಸಂಪರ್ಕಕ್ಕೆ ಬಂದ ಅವರು ಸ್ವಲ್ಪದರಲ್ಲೇ ಗಾಯದಿಂದ ಪಾರಾಗಿದ್ದಾರೆ.

ಆತ ಮಾನಸಿಕ ಅಸ್ವಸ್ಥನಾಗಿದ್ದು, ಪಾನಮತ್ತನಾಗಿದ್ದ ಎಂದೆಲ್ಲಾ ಹೇಳಲಾಗಿದ್ದು, ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read