ತನ್ನ ಮದುವೆಯಲ್ಲಿ ಭಾಗವಹಿಸಿದ ಸಹೋದರಿಗೆ ಶುಲ್ಕ ವಿಧಿಸಿದ ಸಹೋದರ…!

ಮದುವೆ ಸಮಾರಂಭಗಳಲ್ಲಿ ಬಂಧು – ಬಾಂಧವರು ಸಂಭ್ರಮದಿಂದ ಪಾಲ್ಗೊಳ್ಳುತ್ತಾರೆ. ಆದರೆ ಇಲ್ಲೊಂದು ವಿಚಿತ್ರ ಮದುವೆ ಕುರಿತು ತಿಳಿದರೆ ನೀವು ಅಚ್ಚರಿಪಡುತ್ತೀರಿ. ತನ್ನ ಮದುವೆಗೆ ಬಂದ ಸಹೋದರಿಗೆ ಸಹೋದರ ಶುಲ್ಕ ವಿಧಿಸಿದ್ದಾನೆ. ಈ ಸ್ಟೋರಿಯನ್ನು ಸ್ವತಃ ಸಹೋದರಿಯೇ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

“ವೆಡ್ಡಿಂಗ್ ಶೇಮಿಂಗ್” ಸಬ್‌ ರೆಡಿಟ್‌ನಲ್ಲಿನ ಇತ್ತೀಚಿನ ರೆಡ್ಡಿಟ್ ಪೋಸ್ಟ್‌ನಲ್ಲಿ ಮಹಿಳೆ, ಕಿರಿಯ ಸಹೋದರ ತನ್ನ ಮದುವೆಗೆ ಹಾಜರಾಗಲು ಹಣಕ್ಕಾಗಿ ಬೇಡಿಕೆಯಿಟ್ಟ ವಿಚಿತ್ರ ಅನುಭವವನ್ನು ಹಂಚಿಕೊಂಡಿದ್ದಾರೆ.

ಮೊದಲು ಯಾವುದೇ ಹಂತದಲ್ಲಿ ಆತ ಅತಿಥಿಗಳಿಗೆ ಹಾಜರಾಗಲು ಶುಲ್ಕ ವಿಧಿಸುತ್ತಿದ್ದಾನೆ ಎಂದು ತಿಳಿಸಲಾಗಿರಲಿಲ್ಲ. ಆಹ್ವಾನ ಪತ್ರಿಕೆಯಲ್ಲೂ ಎಲ್ಲೂ ಇಲ್ಲ. ಜೊತೆಗೆ ನನ್ನ ಪತಿ ಮತ್ತು ನಾನು ಈಗಾಗಲೇ ಅವನಿಗೆ ಗಿಫ್ಟ್‌ ಆಗಿ $400 ನಗದನ್ನು ನೀಡಿದ್ದೇವೆ” ಎಂದು ತಿಳಿಸಿದ್ದಾರೆ.

ತನ್ನ ರೆಡ್ಡಿಟ್ ಪೋಸ್ಟ್‌ನಲ್ಲಿ, ಡ್ಯಾನ್ಸ್ ಫ್ಲೋರ್ ಅಥವಾ ತೆರೆದ ಬಾರ್ ಇಲ್ಲದ ದುಬಾರಿ ರೆಸ್ಟೋರೆಂಟ್‌ ನ ಖಾಸಗಿ ಕೋಣೆಯಲ್ಲಿ ಮದುವೆ ನಡೆದಿದೆ ಎಂದು ವಿವರಿಸಿದ್ದಾರೆ.

ಮದುವೆಯ ಹಾಜರಾತಿ ಶುಲ್ಕದ ಬಗ್ಗೆ ತನಗೆ ತಿಳಿದಿದೆ ಎಂದು ಸಹೋದರ ಭಾವಿಸಿದ್ದಾನೆ ಮತ್ತು ಅದರ ಬಗ್ಗೆ ತಿಳಿಸಲು ಅವನು ಮರೆತಿದ್ದಾನೆ ಎಂದು ಮಹಿಳೆ ಹೇಳಿದ್ದು, ಕೊನೆಗೆ ಇಬ್ಬರ ನಡುವೆ ವಾಗ್ವಾದ ನಡೆದು ಹಣ ಕಳುಹಿಸುತ್ತೇನೆ ಆದರೆ ಕಾಯಬೇಕು ಎಂದು ತಿಳಿಸಿದ್ದಾಳೆ.

ರೆಡ್ಡಿಟ್ ಪೋಸ್ಟ್‌ನಲ್ಲಿ, ಅನೇಕರು ಮಹಿಳೆಗೆ ತನ್ನ ಸಹೋದರನಿಗೆ ಯಾವುದೇ ಹಣ ಕಳುಹಿಸದಂತೆ ಸಲಹೆ ನೀಡಿದ್ದಾರೆ ಮತ್ತು ಹಣಕ್ಕಾಗಿ ಅವನು ಒತ್ತಾಯಿಸುವುದನ್ನು ಮುಂದುವರೆಸಿದರೆ, ಮದುವೆಯ ಉಡುಗೊರೆಯಾಗಿ ನೀಡಿದ $400 ನಲ್ಲಿ ಲೆಸ್‌ ಮಾಡಬೇಕು ಎಂದಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read