ಉಡುಪಿ: ಗದ್ದೆಯಲ್ಲಿ ಸುಡುಮಣ್ಣು ತಯಾರಿಸುವ ವೇಳೆ ಬೆಂಕಿ ಅವಘಡ ಸಂಭವಿಸಿ ವೃದ್ಧ ಸಜೀವದಹನವಾಗಿರುವ ಘಟನೆ ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ನಡೆದಿದೆ.
ಕಾಳಾವರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಸುಡುಮಣ್ಣಿಗೆ ಹಚ್ಚಿದ್ದ ಬೆಂಕಿಯ ಕಿಡಿ ಒಣ ಹುಲಿಗೆ ತಗುಲಿ ಗದ್ದೆಯಲ್ಲಿದ್ದ ಒಣ ಹುಲ್ಲು ಹೊತ್ತಿ ಉರಿದಿದೆ. ಬೆಂಕಿಯ ಕೆನ್ನಾಲಿಗೆಗೆ ತಪ್ಪಿಸಿಕೊಂಡು ಹೊರಬರಲಾಗದೇ ವೃದ್ಧ ಬೆಂಕಿಗಾಹುತಿಯಾಗಿದ್ದಾರೆ.
ಮಹಾಲಿಂಗ ದೇವಾಡಿಗ (80) ಮೃತ ದುರ್ದೈವಿ. ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.