ಹೈದರಾಬಾದ್‌ನಲ್ಲಿ ಮತ್ತೊಂದು ಭೀಕರ ಮರ್ಯಾದಾಗೇಡು ಹತ್ಯೆ ನಡೆದಿದೆ. ಕುಟುಂಬ ಸದಸ್ಯರ ಇಚ್ಛೆಗೆ ವಿರುದ್ಧವಾಗಿ ತಮ್ಮ ಸೋದರಿಯನ್ನು ಮದುವೆಯಾಗಿದ್ದಕ್ಕಾಗಿ 25 ವರ್ಷದ ವ್ಯಕ್ತಿಯನ್ನು ಆತನ ಪತ್ನಿಯ ಇಬ್ಬರು ಸಹೋದರರು ಕೊಲೆ ಮಾಡಿದ್ದಾರೆ.
ಭಾನುವಾರ ರಾತ್ರಿ ಈ ಘಟನೆ ನಡೆದಿದೆ. ವಾಹನಗಳು ಹಾದುಹೋಗುವಾಗ ರಸ್ತೆಯಲ್ಲಿ ಓಡುತ್ತಿರುವ ವ್ಯಕ್ತಿಯನ್ನು ಹಿಂಬಾಲಿಸಿದ ಇಬ್ಬರು ವ್ಯಕ್ತಿಗಳು ಆತನ ಮೇಲೆ ದಾಳಿ ಮಾಡಿ ಭೀಕರವಾಗಿ ಹತ್ಯೆ ಮಾಡಿದ್ದಾರೆ. ಘಟನೆಯ ಸಿಸಿಕ್ಯಾಮೆರಾ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿವೆ. ವ್ಯಕ್ತಿಯ ಮೇಲೆ ಹರಿತವಾದ ಆಯುಧಗಳಿಂದ ಹಲ್ಲೆ ನಡೆಸಿದ್ದು, ಆತನ ಸಾವಿಗೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.
ಬೇರೊಬ್ಬ ವ್ಯಕ್ತಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಆರೋಪಿಗಳ ಸೋದರಿ ಕಳೆದ ವರ್ಷ ಕೊಲೆಯಾದ ವ್ಯಕ್ತಿಯೊಂದಿಗೆ ಮದುವೆಯಾಗಲು ಮನೆ ಬಿಟ್ಟು ಹೋಗಿದ್ದಳು. ಅದನ್ನು ಅವರ ಕುಟುಂಬ ಸದಸ್ಯರು ವಿರೋಧಿಸಿದ್ದರು.
https://twitter.com/JafferyAzmath/status/1615018180069711874?ref_src=twsrc%5Etfw%7Ctwcamp%5Etweetembed%7Ctwterm%5E1615018180069711874%7Ctwgr%5E91e40d91926bcf9a43fa96918e21c8a827fc6d97%7Ctwcon%5Es1_&ref_url=https%3A%2F%2Fwww.freepressjournal.in%2Findia%2Fon-camera-man-brutally-murdered-by-wifes-2-brothers-for-marrying-against-familys-wishes-in-hyderabad-shocking-video-surfaces