ನಾಯಿಯ ಮೇಲೆ ಮಾರಣಾಂತಿಕ ದಾಳಿ ಮಾಡಿದ ವ್ಯಕ್ತಿ ಅಂದರ್

ತಮ್ಮ ಮಗಳನ್ನು ಕಂಡು ಬೊಗಳಿದ ಕಾರಣಕ್ಕೆ ಪಿಟ್‌ಬುಲ್ ನಾಯಿಯೊಂದರ ಮೇಲೆ ಮಾರಣಾಂತಿಕ ದಾಳಿ ಮಾಡಿದ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿದ ಘಟನೆ ಘಾಜ಼ಿಯಾಬಾದ್‌ನಲ್ಲಿ ಜರುಗಿದೆ.

ನೋಮನ್ ಹಾಗೂ ಇಮ್ರಾನ್ ಹೆಸರಿನ ಈ ಇಬ್ಬರು ನಾಯಿಯ ಮೇಲೆ ನಿರ್ದಯವಾಗಿ ಹಲ್ಲೆ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಘಟನೆಯನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯಲು ಮುಂದಾದ ನಾಯಿಯ ಮಾಲೀಕರ ಮೇಲೂ ದಾಳಿ ಮಾಡಲು ಮುಂದಾಗಿದ್ದಾರೆ ಈ ಕ್ರೂರಿಗಳು.

ಮೋತಿ ಹೆಸರಿನ ಈ ನಾಯಿಯ ಸ್ಥಿತಿ ಚಿಂತಾಜನಕವಾಗಿದೆ. ನಾಯಿಯ ದವಡೆಯಲ್ಲಿ ಮೂಳೆಗಳು ಮುರಿದಿದ್ದು, ’ನಿರ್ಭಯ್ ಪ್ರತಿಷ್ಠಾನ’ ಹೆಸರಿನ ಪ್ರಾಣಿ‌ ದಯಾ ಸಂಘಟನೆಯೊಂದು ನಾಯಿಯ ಚಿಕಿತ್ಸೆಯನ್ನು ನೋಡಿಕೊಳ್ಳುತ್ತಿದೆ.

“ಒಂದು ಪಾರ್ಟಿಗೆ ಸೇರಿದ ನಾಯಿ ಮತ್ತೊಂದು ಪಾರ್ಟಿಗೆ ಸೇರಿದವರ ಮೂರು ವರ್ಷದ ಮಗುವಿನ ಮೇಲೆ ದಾಳಿ ಮಾಡಿದೆ. ಇದರಿಂದ ಮತ್ತೊಂದು ಪಾರ್ಟಿಯ ಮಂದಿ ನಾಯಿಯ ಮೇಲೆ ದಾಳಿ ಮಾಡಿದ್ದಾರೆ. ಪ್ರಕರಣದ ತನಿಖೆ ಜಾರಿಯಲ್ಲಿದ್ದು, ಘಟನೆ ಸಂಬಂಧ ಮೂವರನ್ನು ಬಂಧಿಸಿದ್ದೇವೆ,” ಎಂದು ಘಾಜ಼ಿಯಾಬಾದ್‌ನ ಲೋನಿ ಪೊಲೀಸ್ ಠಾಣೆಯ ಪ್ರಕಟಣೆ ತಿಳಿಸಿದೆ.

https://twitter.com/DCPRuralGZB/status/1651490274680668161?ref_src=twsrc%5Etfw%7Ctwcamp%5Etweetembed%7Ctwterm%5E1651490274680668161%7Ctwgr%5Ef9bc19eedeab8e1770023981a0b087d7d865e0b4%7Ctwcon%5Es1_&ref_url=https%3A%2F%2Fwww.freepressjournal.in%2Fviral%2Fman-brutally-beats-pitbull-with-sticks-in-ghaziabad-attacks-woman-recording-video-too-dog-critical

https://twitter.com/DCPRuralGZB/status/1650842395695783937?ref_src=twsrc%5Etfw%7Ctwcamp%5Etweetembed%7Ctwterm%5E1650842395695783937%7Ctwgr%5Ef9bc19eedeab8e1770023981a0b087d7d865e0b4%7Ctwcon%5Es1_&ref_url=https%3A%2F%2Fwww.freepressjournal.in%2Fviral%2Fman-brutally-beats-pitbull-with-sticks-in-ghaziabad-attacks-woman-recording-video-too-dog-critical

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read